ಬೀಜಿಂಗ್: ಕೊರೊನಾ ವೈರಸ್.. ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಮಹಾಮಾರಿಗೆ 350ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. 14 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿಂದ ನರಳುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ.
ಚೀನಾ ಪ್ರಜೆಗಳಿಗೆ ಭಾರತದ ಇ-ವೀಸಾ ನಿಷೇಧ:
ಯೆಸ್, ಕೇರಳದಲ್ಲಿ ನಿನ್ನೆ ಮತ್ತೊಂದು ಕೊರೊನಾ ಕೇಸ್ ಪತ್ತೆಯಾಗುತ್ತಿದ್ದಂತೇ ಕೇಂದ್ರ ಸರ್ಕಾರ ಫುಲ್ ಅಲರ್ಟ್ ಆಗಿದೆ. ಭಾರತಕ್ಕೂ ಮಾರಣಾಂತಿಕ ವೈರಸ್ ಹರಡುವ ಭೀತಿ ಹಿನ್ನೆಲೆ ಚೀನಾ ಪ್ರಜೆಗಳು ಹಾಗೂ ಅಲ್ಲಿ ನೆಲೆಸಿರೋ ವಿದೇಶಿಗರ ಇ-ವೀಸಾವನ್ನ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಮೂಲಕ ಅವರೆಲ್ಲಾ ಭಾರತಕ್ಕೆ ಪ್ರಯಾಣ ಬೆಳೆಸೋದನ್ನ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಈಗಾಗಲೇ ಹೊಂದಿರೋ ಇ-ವೀಸಾಗಳನ್ನ ಅಸಿಂಧುಗೊಳಿಸಲಾಗಿದೆ ಅಂತ ಬೀಜಿಂಗ್ನಲ್ಲಿರೋ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಕೇರಳದಲ್ಲಿ 120ಕ್ಕೂ ಹೆಚ್ಚು ಜನರಿಗೆ ಗೃಹ ಬಂಧನ!
ಭಾರತದ ಪೈಕಿ ದೇವರನಾಡು ಕೇರಳದಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಇಬ್ಬರಿಗೆ ಕೊರೊನಾ ವೈರಸ್ ತಗುಲಿದ್ರೆ. ಕೇರಳದ ಅಲಪ್ಪುಜಾದಲ್ಲಿ 120ಜನರನ್ನ ಗೃಹ ಬಂಧನದಲ್ಲಿ ಇರಿಸಲಾಗಿದೆ. ಜೊತೆಗ ಅವ್ರ ಮನೆಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನ ನಿಷೇಧಿಸಲಾಗಿದೆ ಅಂತ ಸರ್ಕಾರ ಹೇಳಿದೆ.
ಕೊರೊನಾ ಬಗ್ಗೆ ಸುಳ್ಳು ಮಾಹಿತಿ.. ಮತ್ತಿಬ್ಬರು ಅರೆಸ್ಟ್:
ಇನ್ನು ಕೇರಳದ ಶ್ರಿಶೂರ್ನಲ್ಲಿ ಕೊರೊನಾ ವೈರಸ್ ಬಗ್ಗೆ ಸುಳ್ಳು ಮಾಹಿತಿ ಹರಡಿದ ಇಬ್ಬರು ಮಹಿಳೆಯರು ಅರೆಸ್ಟ್ ಆಗಿದ್ದಾರೆ. ಈ ಮೂಲಕ ಫೇಕ್ ಇನ್ಫಾರ್ಮೇಷನ್ ಸ್ಪ್ರೆಡ್ ಮಾಡಿ ಲಾಕ್ ಆದವರ ಸಂಖ್ಯೆ 5ಕ್ಕೆ ರೈಸ್ ಆಗಿದೆ.
ಇವೆಲ್ಲದರ ನಡುವೆ ಚೀನಾದ ವುಹಾನ್ನಿಂದ ವಿಶೇಷ ವಿಮಾನದಲ್ಲಿ ಬಂದಿರುವ ಭಾರತೀಯರನ್ನ ಹರಿಯಾಣದ ಮಾನೇಸರ್ನ ಐಸಸೋಲೇಷನ್ ಕ್ಯಾಂಪ್ನಲ್ಲಿ ಇಡಲಾಗಿದೆ. ಸೇನಾ ಶಿಬಿರದಲ್ಲಿ ತಂಗಿರುವ ವಿದ್ಯಾರ್ಥಿಗಳು ಭರ್ಜರಿ ಡ್ಯಾನ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ಇನ್ನು ಡೆಡ್ಲಿ ಕೊರೊನಾ ವೈರಸ್ಗೆ ಚಿಕಿತ್ಸೆ ಕಂಡುಹಿಡಿಯುವಲ್ಲಿ ಥಾಯ್ಲ್ಯಾಂಡ್ ವೈದ್ಯರು ಆರಂಭಿಕ ಯಶಸ್ಸು ಕಂಡಿದ್ದಾರೆ ಎನ್ನಲಾಗ್ತಿದೆ. ಈ ಔಷಧಿಯು ಲೋಪಿನಾವಿರ್ ಹಾಗೂ ರಿಟೊನಾವಿರ್ ಎಂಬುದರ ಮಿಶ್ರಣ ಅಂತ ವೈದ್ಯರು ಹೇಳಿದ್ದಾರೆ. ಒಟ್ನಲ್ಲಿ, ಕೊರೊನಾ ಆರ್ಭಟಕ್ಕೆ ಚೀನಾ ತತ್ತರಿಸಿ ಹೋಗಿದ್ದು, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಒಂದೊಂದೇ ಪ್ರಕರಣ ಬೆಳಕಿಗೆ ಬರುತ್ತಿರೋದು ಆತಂಕ ಹೆಚ್ಚಾಗುವಂತೆ ಮಾಡಿದೆ.
Published On - 7:16 am, Mon, 3 February 20