ಅಮೆರಿಕ ರಾಯಭಾರ ಕಚೇರಿ ಬಳಿ ಮತ್ತೆ ರಾಕೆಟ್​ ದಾಳಿ: ಇರಾನ್ ನೆಲದಿಂದಲೇ ಹಾರಿ ಬಂದ್ವಾ ರಾಕೆಟ್ಸ್?

|

Updated on: Jan 27, 2020 | 7:48 AM

ಬಾಗ್ದಾದ್: ಅಮೆರಿಕ ಮತ್ತು ಇರಾನ್.. ಒಂದು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದ್ರೆ, ಮತ್ತೊಂದಕ್ಕೆ ಅಮೆರಿಕ ವಿರುದ್ಧ ಗೆಲ್ಲುವ ಶಕ್ತಿ ಇಲ್ಲದಿದ್ರೂ ಎಲ್ಲಾ ರೀತಿಯ ಡ್ಯಾಮೇಜ್ ಮಾಡುವ ಪವರ್ ಇದೆ. ಇಂಥಾ ಎರಡು ದೇಶಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಯಾರು ಯಾವಾಗ ಬೇಕಾದ್ರೂ ಯುದ್ಧ ಘೋಷಿಸಬಹುದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಈ ಎರಡು ದೇಶಗಳಿಗೆ ಇರಾಕೇ ಯುದ್ಧಭೂಮಿ ರೀತಿಯಾಗಿದೆ. ಯಾಕಂದ್ರೆ ಖಾಸಿಂ ಸುಲೆಮಾನಿ ಹತ್ಯೆ ಬಳಿಕ ಇರಾಕ್​ನಲ್ಲಿರೋ ಅಮೆರಿಕದ ವಾಯುನೆಲೆಗಳ ದಾಳಿ ಮಾಡಿರೋ ಇರಾನ್ ಪದೇ […]

ಅಮೆರಿಕ ರಾಯಭಾರ ಕಚೇರಿ ಬಳಿ ಮತ್ತೆ ರಾಕೆಟ್​ ದಾಳಿ: ಇರಾನ್ ನೆಲದಿಂದಲೇ ಹಾರಿ ಬಂದ್ವಾ ರಾಕೆಟ್ಸ್?
Follow us on

ಬಾಗ್ದಾದ್: ಅಮೆರಿಕ ಮತ್ತು ಇರಾನ್.. ಒಂದು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದ್ರೆ, ಮತ್ತೊಂದಕ್ಕೆ ಅಮೆರಿಕ ವಿರುದ್ಧ ಗೆಲ್ಲುವ ಶಕ್ತಿ ಇಲ್ಲದಿದ್ರೂ ಎಲ್ಲಾ ರೀತಿಯ ಡ್ಯಾಮೇಜ್ ಮಾಡುವ ಪವರ್ ಇದೆ. ಇಂಥಾ ಎರಡು ದೇಶಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಯಾರು ಯಾವಾಗ ಬೇಕಾದ್ರೂ ಯುದ್ಧ ಘೋಷಿಸಬಹುದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಈ ಎರಡು ದೇಶಗಳಿಗೆ ಇರಾಕೇ ಯುದ್ಧಭೂಮಿ ರೀತಿಯಾಗಿದೆ. ಯಾಕಂದ್ರೆ ಖಾಸಿಂ ಸುಲೆಮಾನಿ ಹತ್ಯೆ ಬಳಿಕ ಇರಾಕ್​ನಲ್ಲಿರೋ ಅಮೆರಿಕದ ವಾಯುನೆಲೆಗಳ ದಾಳಿ ಮಾಡಿರೋ ಇರಾನ್ ಪದೇ ಪದೆ ಪ್ರತೀಕಾರ ತೀರಿಸಿಕೊಳ್ತಿದೆ. ಇದೀಗ ಅಮೆರಿಕ ಮೇಲೆ ಅಂಥದ್ದೇ ಮತ್ತೊಂದು ದಾಳಿ ನಡೆದಿದೆ.

5 ಕತ್ಯುಶಾ ಮಾದರಿಯ ರಾಕೆಟ್​ಗಳಿಂದ ಅಟ್ಯಾಕ್!
ಯೆಸ್, ಇರಾಕ್​ ರಾಜಧಾನಿ ಬಾಗ್ದಾದ್​ನಲ್ಲಿರೋ ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ ನಡೆದಿದೆ. ಆಗಸದಿಂದ ತೂರಿ ಬಂದ ಕತ್ಯುಶಾ ಮಾದರಿಯ ಐದು ರಾಕೆಟ್​ಗಳು ಅಮೆರಿಕ ಎಂಬಸಿ ಕಚೇರಿಯ ಕಾಂಪೌಂಡ್ ಬಳಿಯೇ ಸ್ಫೋಟಗೊಂಡಿವೆ. ರಾಕೆಟ್​ ದಾಳಿಯಲ್ಲಿ ಸಾವು ನೋವುಗಳಾದ ಬಗ್ಗೆ ಈವರೆಗೂ ಯಾವುದೇ ವರದಿಯಾಗಿಲ್ಲ. ಜೊತೆಗೆ ದಾಳಿಯ ಹೊಣೆಯನ್ನ ಇದುವರೆಗೂ ಯಾರೂ ಹೊತ್ತುಕೊಂಡಿಲ್ಲ.

ಅಮೆರಿಕ ಹಾಗೂ ಇರಾನ್​ ನಡುವಿನ ಸಂಘರ್ಷ ನೋಡಿದ್ರೆ ಇರಾನ್​ ನೆಲದಿಂದಲೇ ಈ ರಾಕೆಟ್​ಗಳು ಹಾರಿರೋ ಸಾಧ್ಯತೆ ಇದೆ. ಒಟ್ನಲ್ಲಿ, ನಮ್ಮವರನ್ನ ಮುಟ್ಟಿದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ಎಚ್ಚರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಾಯಭಾರ ಕಚೇರಿ ಮೇಲಿನ ದಾಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ.

Published On - 7:47 am, Mon, 27 January 20