ನವದೆಹಲಿ: ಮಣಿಪುರ, ಅಫ್ಘಾನಿಸ್ತಾನ ಹಾಗೂ ತಜಿಕಿಸ್ತಾನದಲ್ಲೂ ಲಘು ಭೂಕಂಪ (Earthquake) ಸಂಭವಿಸಿರುವುದು ವರದಿಯಾಗಿದೆ. ಸೋಮವಾರ ಮಧ್ಯರಾತ್ರಿ ರಾತ್ರಿ 2 ಗಂಟೆ 46ರ ವೇಳೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ ತೀವ್ರತೆ 3.2ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Seismology Center) ತಿಳಿಸಿದೆ.
ಇನ್ನು ಅಫ್ಘಾನಿಸ್ತಾನದಲ್ಲಿ ಇಂದು (ಮಂಗಳವಾರ) ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.1ರಷ್ಟು ದಾಖಲಾಗಿದೆ. ನಿನ್ನೆ (ಫೆ.27) ಸಹ ಅಫ್ಘಾನಿಸ್ತಾನ ಭೂಕಂಪ ಆಗಿತ್ತು. ಇದೀಗ 24ಗಂಟೆಗಳಲ್ಲಿ ಇದು ಎರಡನೇ ಬಾರಿ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿಯಾದ ವರದಿಗಳು ತಿಳಿದುಬಂದಿಲ್ಲ.
ತಜಿಕಿಸ್ತಾನದಲ್ಲೂ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.3ರಷ್ಟು ದಾಖಲಾಗಿದೆ.