ಚಂದ್ರಯಾನ 2 ಯೋಜನೆ ವಿಫಲಗೊಂಡಾಗ ಇಸ್ರೋ ಹಾಗೂ ಭಾರತದ ಬಗ್ಗೆ ಗೇಲಿ ಮಾಡಿದ್ದ ಪಾಕಿಸ್ತಾನ ನಾಯಕ ಈಗ ಚಂದ್ರಯಾನ 3(Chandrayaan 3)ಯನ್ನು ಮನುಕುಲದ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಇಸ್ರೋದ ಚಂದ್ರಯಾನ 2 ಯೋಜನೆಯು ಅಂತಿಮ ಕ್ಷಣದಲ್ಲಿ ವಿಫಲಗೊಂಡಿತ್ತು, ಈ ಸಮಯ ಭಾರತೀಯರಲ್ಲಿ ಬೇಸರ ಮೂಡಿತ್ತು, ಆ ಸಮಯದಲ್ಲಿ ಪಾಕ್ ಸಚಿವರಾಗಿದ್ದ ಫವಾದ್ ಹುಸೇನ್ ಖಾನ್ ಭಾರತದ ಬಗ್ಗೆ ಲೇವಡಿ ಮಾಡಿದ್ದರು.
ಆದರೆ ಈಗ ಅದೇ ವ್ಯಕ್ತಿ ಚಂದ್ರಯಾನ 3 ಮನುಕುಲಕ್ಕೆ ಇದೊಂದು ಐತಿಹಾಸಿಕ ಕ್ಷಣ, ಚಂದ್ರಯಾನ 3 ನೇರ ಪ್ರಸಾರ ಮಾಡುವಂತೆ ಕೇಳಿಕೊಂಡಿದ್ದಾರೆ. ಬುಧವಾರ ಸಂಜೆ ಚಂದ್ರಯಾನ-3 ರ ಚಂದ್ರನ ಲ್ಯಾಂಡಿಂಗ್ ಅನ್ನು ಪ್ರಸಾರ ಮಾಡುವಂತೆ ತಮ್ಮ ದೇಶವನ್ನು ಒತ್ತಾಯಿಸಿದರು.
ಇಂದು ಸಂಜೆ 6:15 ಕ್ಕೆ ಚಂದ್ರಯಾನದ ಚಂದ್ರನ ಲ್ಯಾಂಡಿಂಗ್ ಅನ್ನು ಪಾಕ್ ಮಾಧ್ಯಮಗಳು ನೇರಪ್ರಸಾರ ಮಾಡಬೇಕು ಎಂದು ಕೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಚಂದ್ರಯಾನಕ್ಕೆ 900 ಕೋಟಿ ಖರ್ಚು ಮಾಡಿದ್ದಕ್ಕಾಗಿ ಪ್ರಶ್ನಿಸಿದರು ಹಾಗೂ ಗೊತ್ತಿಲ್ಲದೇ ಇರುವ ಪ್ರದೇಶಕ್ಕೆ ಇಷ್ಟೆಲ್ಲಾ ಹಣ ಖರ್ಚು ಮಾಡುವ ಅಗತ್ಯವಿತ್ತೇ ಎಂದು ಕೇಳಿದ್ದರು.
ಫವಾದ್ ಟ್ವೀಟ್
Pak media should show #Chandrayan moon landing live tomorrow at 6:15 PM… historic moment for Human kind specially for the people, scientists and Space community of India…. Many Congratulations
— Ch Fawad Hussain (@fawadchaudhry) August 22, 2023
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕೇವಲ 2.1 ಕಿಮೀ ಎತ್ತರದಲ್ಲಿ ನೆಲಮಟ್ಟದೊಂದಿಗೆ ಸಂವಹನವನ್ನು ಕಳೆದುಕೊಂಡಾಗ ಕೊನೆಯ ಕಾರ್ಯಾಚರಣೆಯ ಅಂತಿಮ ಹಂತದ ವೈಫಲ್ಯದ ನಂತರ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಇಂಡಿಯಾ ಫೇಲ್ಡ್ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದರು.
ಮತ್ತಷ್ಟು ಓದಿ: ಇಸ್ರೋ ತಂಡ ಭಾರತಕ್ಕೆ ಸೇರಿದ್ದು, ಯಾವುದೇ ರಾಜಕೀಯ ಘಟಕವಲ್ಲ: ಚಂದ್ರಯಾನ-3 ಬಗ್ಗೆ ಮಮತಾ ಬ್ಯಾನರ್ಜಿ
ಫವಾದ್ ಹುಸೇನ್ ಅವರು ಜುಲೈ 14 ರಂದು ಇಸ್ರೋ ಮೂರನೇ ಚಂದ್ರಯಾನ ಮಿಷನ್ ಅನ್ನು ಪ್ರಾರಂಭಿಸಿದಾಗ ಭಾರತದ ಬಾಹ್ಯಾಕಾಶ ಮತ್ತು ವಿಜ್ಞಾನ ಸಮಯದಾಯವನ್ನು ಅಭಿನಂದಿಸಿದ್ದಾರೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕೇವಲ 2.1 ಕಿ.ಮೀ ಎತ್ತರದಲ್ಲಿ ಸಂವಹನ ಕಳೆದುಕೊಂಡಾಗ ಕೊನೆಯ ಕಾರ್ಯಾಚರಣೆಯ ಅಂತಿಮ ಹಂತದ ವೈಫಲ್ಯದ ನಂತರ ಭಾರತವನ್ನು ಆಡಿಕೊಂಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:47 am, Wed, 23 August 23