Earthquake: ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ; ಕಂಪನದ ತೀವ್ರತೆ 4.1ರಷ್ಟು ದಾಖಲು
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ ಗುರುವಾರ ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ.
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.1ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ ಗುರುವಾರ ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಬಗ್ಗೆ NCS ಟ್ವೀಟ್ ಮಾಡಿದೆ.
ಮಧ್ಯಾಹ್ನ 02:35:57 IST ಕ್ಕೆ ಅಫ್ಘಾನಿಸ್ತಾನದ ಫೈಜಾಬಾದ್‌ನಿಂದ ಪೂರ್ವ ಈಶಾನ್ಯಕ್ಕೆ 267 ಕಿಮೀ ದೂರದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 10 ಕಿಲೋಮೀಟರ್ ಆಳದಲ್ಲಿ, 36.38 ಅಕ್ಷಾಂಶ ಮತ್ತು 70.94 ರೇಖಾಂಶದಲ್ಲಿ ಸಂಭವಿಸಿದೆ.
Earthquake of Magnitude:4.1, Occurred on 02-03-2023, 02:35:57 IST, Lat: 37.73 & Long: 73.47, Depth: 245 Km ,Location: 267km ENE of Fayzabad, Afghanistan for more information Download the BhooKamp App https://t.co/WlTpOROtRj@Ravi_MoES @Dr_Mishra1966 @ndmaindia @Indiametdept pic.twitter.com/JOu00tVO8v
— National Center for Seismology (@NCS_Earthquake) March 1, 2023
ಇದನ್ನೂ ಓದಿ:Earthquake ಮಣಿಪುರ, ಅಫ್ಘಾನಿಸ್ತಾನ, ತಜಿಕಿಸ್ತಾನದಲ್ಲೂ ಲಘು ಭೂಕಂಪ
ಇನ್ನು ಫೆ.27 ಸಹ ಅಫ್ಘಾನಿಸ್ತಾನದಲ್ಲಿ ಭೂಕಂಪ ಆಗಿತ್ತು. ಬಳಿಕ ಮಂಗಳವಾರವೂ ಎರಡನೇ ಬಾರಿ ಭೂಕಂಪ ಸಂಭವಿಸಿತ್ತು. ಇದೀಗ ಮತ್ತೆ ಇಂದು 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಹಾನಿಯಾದ ವರದಿಗಳು ತಿಳಿದುಬಂದಿಲ್ಲ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:39 am, Thu, 2 March 23