ಚಳಿಗಾಲದಲ್ಲಿ ಸೋಂಕುಗಳು ಬೇಗ ಹರಡುವುದರಿಂದ ನೀವು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.
ಹೊರಗೆ ಚಳಿಯಿರುವಾಗ, ನೀವು ಕಾರ್ಡಿಜನ್, ಕೋಟ್ ಮತ್ತು ದಪ್ಪಗಿನ ಬಟ್ಟೆಯನ್ನು ಧರಿಸಿ.
ಮನೆಯೊಳಗೆ ಸೂರ್ಯನ ಬೆಳಕು ಬೀಳಲು ಕಿಟಕಿಗಳ ಪರದೆಯನ್ನು ತೆರೆದಿಡಿ.
ಮಸಾಲೆಯುಕ್ತ ಆಹಾರವನ್ನು ಸೇವಿಸಿ. ಇದು ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ.
ಅರಿಶಿನ, ಜೇನುತುಪ್ಪ, ಶುಂಠಿ, ದಾಲ್ಚಿನ್ನಿ, ಬೀಜಗಳು, ಮೊಟ್ಟೆಗಳು ಮತ್ತು ಮೆಣಸು ಬಳಸಿರುವ ಬೆಚ್ಚಗಿನ ಆಹಾರವನ್ನು ಸೇವಿಸಿ.
ದೇಹದ ಉಷ್ಣತೆಯು ಚಲನೆಯ ಮೂಲಕ ಉತ್ಪತ್ತಿಯಾಗುತ್ತದೆ. ಆದ್ದರಿಂದ ವ್ಯಾಯಾಮ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
ವಿಟಮಿನ್ ಬಿ12 ಮತ್ತು ಕಬ್ಬಿಣಾಂಶವನ್ನು ಸೇವಿಸಿ. ಇದು ರಕ್ತಹೀನತೆ ತಡೆಗಟ್ಟಿ ನಿಮ್ಮ ದೇಹವನ್ನು ಬೆಚ್ಚಗಿರಿಸುತ್ತದೆ.