ಈ ಗಿಡಗಳನ್ನು ಎಂದಿಗೂ ನಿಮ್ಮ ಮನೆಯಲ್ಲಿ ಬೆಳೆಸಬೇಡಿ
ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಗಿಡಗಳನ್ನು ನಿಮ್ಮ ಮನೆಯಲ್ಲಿ ಬೆಳೆಸುವುದು ಅಶುಭದ ಸಂಕೇತ.
ಸಾಮಾನ್ಯವಾಗಿ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಗಿಡಗಳು ಧನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗುತ್ತದೆ.
ಆದರೆ ಕೆಲವು ಗಿಡಗಳನ್ನು ನೆಡಲೇಬೇಡಿ ಎಂದು ವಾಸ್ತು ಶಾಸ್ತ್ರಜ್ಞರು ಎಚ್ಚರಿಸುತ್ತಾರೆ.
ಕಳ್ಳಿ ಗಿಡ: ಪಾಪಸ್ ಕಳ್ಳಿ ಜಾತಿಯಂತಹ ಗಿಡಗಳನ್ನು ನೆಡುವುದು ಮನೆಯಲ್ಲಿ ನಕರಾತ್ಮಕ ಶಕ್ತಿಗೆ ಕಾರಣವಾಗಬಹುದು.
ಬೋನ್ಸೈ: ವಾಸ್ತು ತಜ್ಞರ ಪ್ರಕಾರ ಈ ಗಿಡ ಮನೆಯೊಳಗೆ ಬೆಳೆಸುವುದು ಒಳ್ಳೆಯದಲ್ಲ ಎಂದು ಎಚ್ಚರಿಸುತ್ತಾರೆ.
ಒಣಗಿದ ಗಿಡಗಳು: ಸತ್ತ ಅಥವಾ ಒಣಗಿದ ಗಿಡಗಳನ್ನು ಮನೆಯೊಳಗೆ ಇಡುವುದು ಅಶುಭದ ಸಂಕೇತ.
ಹಾಗಲಕಾಯಿ ಗಿಡ: ವಾಸ್ತು ತಜ್ಞರ ಪ್ರಕಾರ ಇದು ನಿಮ್ಮ ಕುಟುಂಬದ ಸಂಬಂಧದಲ್ಲಿ ಕಹಿಗೆ ಕಾರಣವಾಗಬಹುದು ಎಂದು ಎಚ್ಚರಿಸುತ್ತಾರೆ.
ಮುಳ್ಳಿನ ಸಸ್ಯಗಳು: ಈ ಗಿಡಗಳು ನಿಮ್ಮ ಮನೆಯ ಧನಾತ್ಮಕ ಶಕ್ತಿಗೆ ಅಡ್ಡಿಯುಂಟು ಮಾಡಬಹುದು.