ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಕೆಲವೊಂದು ಬದಲಾವಣೆಗಳು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಮನೆಯ ನಾಮಫಲಕ(Name Plate)ವನ್ನು ಕಪ್ಪು ಬಣ್ಣದಿಂದ ಅಲಂಕರಿಸಬೇಡಿ.
ಮಲಗುವ ಕೋಣೆಯಲ್ಲಿ ಟಿವಿ ಇಡಬೇಡಿ, ಬದಲಾಗಿ ಪುಸ್ತಕಗಳನ್ನು ಇರಿಸಿ.
ಮನೆಯ ಮುಂಭಾಗದಲ್ಲಿ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿಗೆ ನೆಡಬೇಡಿ.
ನೀವು ಮಲಗುವಾಗ ನಿಮ್ಮ ತಲೆ ದಕ್ಷಿಣದ ಕಡೆಗೆ ಇರಲಿ. ಉತ್ತರ ದಿಕ್ಕಿಗೆ ಎಂದಿಗೂ ತಲೆ ಇಟ್ಟು ಮಲಗಬೇಡಿ.
ನಿಮ್ಮ ಮಕ್ಕಳ ಓದುವ ಕೊಠಡಿ ಅಥವಾ ಲೈಬ್ರರಿ ಗೋಡೆಗಳಿಗೆ ತಿಳಿ ನೀಲಿ ಬಣ್ಣವನ್ನು ಬಳಿಯಿರಿ.
ಪೂಜಾ ಕೊಠಡಿಯಲ್ಲಿ ಎಂದಿಗೂ ಮಲಗುವ ಅಭ್ಯಾಸವನ್ನು ಇಟ್ಟುಕೊಳ್ಳಬೇಡಿ.
ಅಡುಗೆ ಕೋಣೆಯಲ್ಲಿ ಎಂದಿಗೂ ದಕ್ಷಿಣ ದಿಕ್ಕಿಗೆ ಮುಖಮಾಡಿ ಆಹಾರಗಳನ್ನು ಬೇಯಿಸಬೇಡಿ.