ಯುಪಿಐ ಮೂಲಕ ಹಣ ಪಾವತಿ, ವರ್ಗಾವಣೆ ವೇಳೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಯುಪಿಐ ಮೂಲಕ ಹಣ ಸ್ವೀಕರಿಸುವಾಗ ಎಂದಿಗೂ ಯುಪಿಐ ಪಿನ್ ಶೇರ್ ಮಾಡಬೇಡಿ.
ಹಣ ಕಳುಹಿಸುವುದಕ್ಕೂ ಮುನ್ನ ಕಳುಹಿಸಬೇಕಾದ ವ್ಯಕ್ತಿಯ ಗುರುತನ್ನು ಖಾತರಿಪಡಿಸಿಕೊಂಡೇ ಮುಂದುವರಿಯಿರಿ.
ಅಪರಿಚಿತರಿಂದ ಬರುವ ಹಣ ಸ್ವೀಕೃತಿ ಸಂದೇಶವನ್ನು ಸ್ವೀಕರಿಸಬೇಡಿ.
ಯುಪಿಐ ಪಿನ್ ಅನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.
ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳುಹಿಸುವುದಾದರೆ ಸ್ವೀಕರಿಸುವವರ ವಿವರಗಳನ್ನು ಖಾತರಿಪಡಿಸಿಕೊಳ್ಳಿ.
ನಿಯಮಿತವಾಗಿ ಯುಪಿಐ ಪಿನ್ ಅನ್ನು ಬದಲಾಯಿಸುತ್ತಿರಿ.