ಈ ಬಾರಿಯ ಕೇಂದ್ರ ಬಜೆಟ್ ಕೂಡ ಕಾಗದರಹಿತವಾಗಿರಲಿದ್ದು, ಡಿಜಿಟಲ್ ಮಾದರಿಯಲ್ಲಿರಲಿದೆ.
ಬಜೆಟ್ ಪ್ರತಿ ಯೂನಿಯನ್ ಬಜೆಟ್ ಆ್ಯಪ್ನಲ್ಲಿಯೂ ಲಭ್ಯವಿರಲಿದೆ.
ಯೂನಿಯನ್ ಬಜೆಟ್ ಆ್ಯಪ್ ಅನ್ನು 2021ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು.
ಆ್ಯಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಆ್ಯಪ್ ಸ್ಟೋರ್, ಕೇಂದ್ರ ಬಜೆಟ್ ಸಂಬಂಧಿತ ವೆಬ್ಸೈಟ್ನಿಂದಲೂ ಆ್ಯಪ್ ಡೌನ್ಲೋಡ್ ಮಾಡಬಹುದು.
ಮೊಬೈಲ್ಫೋನ್ ಮೂಲಕ ಬಜೆಟ್ ಪ್ರತಿಯನ್ನು ಓದಲು ಆ್ಯಪ್ ಉತ್ತಮ ಆಯ್ಕೆಯಾಗಿದೆ.
ಬಜೆಟ್ ಸಂಬಂಧಿತ 14 ದಾಖಲೆಗಳು, ಹಣಕಾಸು ಸಚಿವರ ಬಜೆಟ್ ಭಾಷಣದ ಪ್ರತಿ ಕೂಡ ಆ್ಯಪ್ನಲ್ಲಿ ಲಭ್ಯವಾಗಲಿದೆ.
ಕಳೆದ ಎರಡು ವರ್ಷಗಳ ಬಜೆಟ್ ವಿವರ ಕೂಡ ಆ್ಯಪ್ನಲ್ಲಿ ಲಭ್ಯವಾಗಲಿದೆ.