ಚೆಕ್ ಬರೆಯುವಾಗ ಈ ತಪ್ಪುಗಳನ್ನು ಮಾಡದಿರಿ
ಚೆಕ್ ಬರೆಯುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ಅನಗತ್ಯ ಕಾನೂನು ಸಿಕ್ಕುಗಳು ಬರಬಹುದು.
1. ಚೆಕ್ ಮೇಲೆ ಪದಗಳಲ್ಲಿ ಹಣವನ್ನು ನಮೂದಿಸಿದ ಬಳಿಕ ಅಂತ್ಯದಲ್ಲಿ Only ಎಂದು ತಪ್ಪದೇ ಬರೆಯಿರಿ
2. ಬ್ಲ್ಯಾಂಕ್ ಚೆಕ್ಗೆ ಎಂದಿಗೂ ಸಹಿಹಾಕದಿರಿ. ಯಾರಿಗೆ ಚೆಕ್ ಕೊಡುತ್ತೀರೋ ಅವರ ಹೆಸರು, ಹಣ, ದಿನಾಂಕ ಹಾಕಿದ ಬಳಿಕ ಸಹಿ ಮಾಡಿರಿ
3. ಚೆಕ್ಗೆ ಸಹಿ ಬಹಳ ಮುಖ್ಯ. ಇದು ನಿಖರವಾಗಿರಬೇಕು. ಸಣ್ಣ ತಪ್ಪಾದರೂ ಚೆಕ್ ತಿರಸ್ಕೃತವಾಗಬಹುದು.
4. ಚೆಕ್ನಲ್ಲಿ ಸರಿಯಾದ ದಿನಾಂಕ ಹಾಕುವುದನ್ನು ಮರೆಯದಿರಿ. ಚೆಕ್ ಬರೆದ ದಿನದ ದಿನಾಂಕವನ್ನೇ ಬರೆಯುವುದು ಸರಿ. ಪೋಸ್ಟ್ ಡೇಟ್ ಚೆಕ್ ಸಾಧ್ಯವಾದಷ್ಟೂ ತಪ್ಪಿಸಿ.
5. ಚೆಕ್ ಬರೆಯುವಾಗ ಬಾಲ್ಪಾಯಿಂಟ್ ಪೆನ್ ಅಥವಾ ಪರ್ಮನೆಂಟ್ ಇಂಕ್ ಪೆನ್ ಉಪಯೋಗಿಸಿ. ಇದರಿಂದ ಅಕ್ಷರ ಅಳಿಸಿಹೋಗಿ ಚೆಕ್ ದುರ್ಬಳಕೆಯಾಗುವ ಸಾದ್ಯತೆ ತಪ್ಪಿಸಬಹುದು.
6. ಚೆಕ್ ಬರೆಯುವ ಮುನ್ನ ಆ ಮೊತ್ತದ ಹಣ ನಿಮ್ಮ ಖಾತೆಯಲ್ಲಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇಲ್ಲವಾದರೆ ಚೆಕ್ ಬೌನ್ಸ್ ಆಗುತ್ತದೆ.
7. ಚೆಕ್ ನೀಡುವ ಮುನ್ನ ಅದರ ನಂಬರ್ ಅನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಚೆಕ್ ವಿಚಾರದಲ್ಲಿ ವ್ಯಾಜ್ಯ ಉಂಟಾದರೆ ಅದು ಉಪಯೋಗಕ್ಕೆ ಬರಬಹುದು.
ಮತ್ತಷ್ಟು ನೋಡಿ