ಮಳೆಗಾಲದಲ್ಲಿ ನೇರಳೆ ಹಣ್ಣಿನಿಂದಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳಿ
ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು, ಜೊತೆಗೆ ಸೋಂಕುಗಳು ಹರಡಲು ಪ್ರಾರಂಭವಾಗುತ್ತದೆ.
ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡುವಲ್ಲಿ ನೇರಳೆ ಹಣ್ಣು ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.
ನೇರಳೆ ಹಣ್ಣಿನ ಸೇವನೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಮೊಣಕಾಲು ನೋವಿನಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.
ಜ್ವರ ಬಂದಾಗ ಕೊತ್ತಂಬರಿ ರಸದೊಂದಿಗೆ ನೇರಳೆ ಹಣ್ಣಿನ ಜ್ಯೂಸ್ ಸೇವಿಸುವುದು ಉತ್ತಮ ಆಯ್ಕೆ.
ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ನೇರಳೆ ಹಣ್ಣನ್ನು ಸೇವಿಸುವುದು ಉತ್ತಮ.
ಗರ್ಭಿಣಿಯರು ನೇರಳೆ ಹಣ್ಣು ತಿನ್ನುವುದನ್ನು ತಪ್ಪಿಸಿ, ಏಕೆಂದರೆ ಇದು ಕರಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.