ಬೇಸಿಗೆಯಲ್ಲಿ ಪ್ರತೀ ದಿನ ಬಿಯರ್ ಕುಡಿಯುವುದು ಎಷ್ಟು ಸೂಕ್ತ?
ಯಾವುದೇ ಪಾರ್ಟಿ ಅಥವಾ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುವಾಗ ಬಿಯರ್ ಕುಡಿಯುವುದು ಸಾಮಾನ್ಯ.
ಬೇಸಿಗೆಯಲ್ಲಿ ಪ್ರತೀ ದಿನ ಬಿಯರ್ ಕುಡಿಯುವುದರಿಂದ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ.
ನಿಯಮಿತವಾಗಿ ಬಿಯರ್ ಕುಡಿಯುವ ವ್ಯಕ್ತಿಗಳು ಹೆಚ್ಚು ಕಾಲ ಬದುಕುತ್ತಾರೆ ಎಂದು ಸಂಶೋಧನೆಗಳು ತಿಳಿಸಿವೆ.
ಸಾಕಷ್ಟು ಜನರು ಬೇಸಿಗೆಯ ಸುಡುಬಿಸಿಲಿನಿಂದ ದೇಹವನ್ನು ತಂಪಾಗಿರಿಸಲು ಬಿಯರ್ ಕುಡಿಯುತ್ತಾರೆ.
ಆದರೆ ಸಾಮಾನ್ಯವಾಗಿ ನೀವು ಕುಡಿಯುವ ಒಂದು ಗ್ಲಾಸ್ ಬಿಯರ್ನಲ್ಲಿ 150 ಕ್ಯಾಲೋರಿಗಳನ್ನು ಹೊಂದಿರುತ್ತದೆ.
ನೀವು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿಸಲು ದಿನಾ ಬಿಯರ್ ಕುಡಿಯುತ್ತಿದ್ದರೆ, ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.
ಇತರ ಆಲ್ಕೋಹಾಲ್ ಯುಕ್ತ ಪಾನೀಯಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಹಾನಿಕಾರಕ ಎಂದು ಪರಿಗಣಿಸಲಾಗಿದೆ.
ನಿಯಮಿತವಾಗಿ ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.