10 August 2023

ಭಾರತದ ಯಶಸ್ವಿ ಮಹಿಳಾ ಉದ್ಯಮಿಗಳು ಮತ್ತವರ ಶಿಕ್ಷಣದ ವಿವರ

Author: Vijayasarathy SN

ನೀತಾ ಅಂಬಾನಿ

ರಿಲಾಯನ್ಸ್ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ ಓದಿದ್ದು ಬಿಕಾಂ ಪದವಿ; ಮುಂಬೈನ ಎನ್ ಎಂ ಕಾಮರ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ

ಸುಧಾಮೂರ್ತಿ

ಇನ್ಫೋಸಿಸ್ ಫೌಂಡೇಶನ್​ನ ಸುಧಾಮೂರ್ತಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ; ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್​ನಲ್ಲಿ ಎಂಇ ಮಾಡಿದ್ದಾರೆ.

ಕಿರಣ್ ಮಜುಮ್ದಾರ್

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಬ್ರಿವಿಂಗ್ ಕೋರ್ಸ್ ಮಾಡಿದ್ದಾರೆ.

ಇಂದ್ರಾ ನೂಯಿ

ಪೆಪ್ಸಿ ಕೋ ಕಂಪನಿಯ ಮಾಜಿ ಮುಖ್ಯಸ್ಥೆ ಇಂದ್ರಾ ನೂಯಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿಎಸ್​ಸಿ ಮಾಡಿದ್ದಾರೆ.

ರೋಷನಿ ನಾದರ್

ಹೆಚ್​​ಸಿಎಲ್ ಟೆಕ್ನಾಲಜೀಸ್ ಮುಖ್ಯಸ್ಥೆ ರೋಷನಿ ನಾದರ್ ದೆಹಲಿಯ ವಸಂತ್ ವ್ಯಾಲಿ ಸ್ಕೂಲ್​ ಹಾಗು ಅಮೆರಿಕದ ನಾರ್ತ್ ವೆಸ್ಟರ್ನ್ ವಿವಿಯಲ್ಲಿ ಓದಿದ್ದಾರೆ.

ಫಾಲ್ಗುಣಿ ನಾಯರ್

ನೈಕಾ ಕಂಪನಿ ಸಿಇಒ ಫಾಲ್ಗುಣಿ ಸಂಜಯ್ ನಾಯರ್ ಮುಂಬೈನ ಸೈಡನ್​ಹ್ಯಾಮ್ ಕಾಮರ್ಸ್ ಮತ್ತು ಎಕನಾಮಿಕ್ಸ್ ಕಾಲೇಜಿನಲ್ಲಿ ಬಿಕಾಂ ಮಾಡಿದ್ದಾರೆ.

ಲೀನಾ ಗಾಂಧಿ

ಯುಎಸ್​ವಿ ಫಾರ್ಮಸ್ಯೂಟಿಕಲ್ ಸಂಸ್ಥೆಯ ಮುಖ್ಯಸ್ಥೆ ಲೀನಾ ಗಾಂಧಿ ತಿವಾರಿ ಅಮೆರಿಕದ ಬೋಸ್ಟನ್ ಯೂನಿವರ್ಸಿಟಿಯಿಂದ ಎಂಬಿಎ ಮಾಡಿದ್ದಾರೆ.

ರಾಧಾ ವೆಂಬು

ಜೋಹೋ ಕಾರ್ಪೊರೇಷನ್ ಎಂಬ ಸಾಫ್​ವೇರ್ ಕಂಪನಿಯ ಮಾಲಕಿ ರಾಧಾ ವೆಂಬು ಐಐಟಿ ಮದ್ರಾಸ್​ನಲ್ಲಿ ಪದವಿ ಪಡೆದಿದ್ದಾರೆ.

ರೇಷ್ಮಾ ಕೇವಲರಮಣಿ

ವೆರ್ಟೆಕ್ಸ್ ಫಾರ್ಮಾಸ್ಯೂಟಿಕಲ್ಸ್​ನ ಸಿಇಒ ರೇಷ್ಮಾ ಕೇವಲರಮಣಿ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್​ನಲ್ಲಿ ಪದವಿ ಪಡೆದಿದ್ದಾರೆ.

ಸ್ಮಿತಾ ಕ್ರಿಷ್ಣ ಗೋದ್ರೇಜ್

ಗೋದ್ರೇಜ್ ಗ್ರೂಪ್​ನ ಸ್ಮಿತಾ ಕ್ರಿಷ್ಣ ಗೋದ್ರೇಜ್ ಅವರು ಮುಂಬೈನ ಜೆಬಿ ಪೆಟಿಟ್ ಸ್ಕೂಲ್​ನಲ್ಲಿ ಶಿಕ್ಷಣ ಪಡೆದಿದ್ದಾರೆ.