ಒತ್ತಡದ ಜೀವನಶೈಲಿಯಲ್ಲಿ ನಿಮ್ಮ ಬೆನ್ನು ಬಾಗಿದೆಯೇ? ಹಾಗಿದ್ದರೆ ಈ ಭಂಗಿ ಅಭ್ಯಾಸಿಸಿ
ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲೇ ಬೆನ್ನು ಬಾಗಿರುವ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ.
ಇದು ಆರೋಗ್ಯದ ಜೊತೆಗೆ ನಿಮ್ಮ ದೈಹಿಕ ಆಕರ್ಷಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಆದ್ದರಿಂದ ಇಲ್ಲಿ ತಿಳಿಸಲಾಗಿರುವ ಯೋಗ ಭಂಗಿಗಳನ್ನು ನಿಮ್ಮ ದಿನಚರಿಯಲ್ಲಿ ರೂಢಿಸಿ, ಫಿಟ್ ಆಗಿರಿ.
ತಾಡಾಸನ: ಈ ಪರ್ವತ ಭಂಗಿ ಪ್ರತೀ ದಿನ ಅಭ್ಯಾಸಿಸುವುದರಿಂದ ಬೆನ್ನು ಮತ್ತು ಕುತ್ತಿಗೆ ನೇರವಾಗುತ್ತದೆ.
ಸುಖಾಸನ ಮಾಡುವುದು ನಿಮ್ಮ ಒಟ್ಟಾರೆ ಆರೋಗ್ಯದ ಜೊತೆಗೆ ಬೆನ್ನು ಮೂಳೆಗೂ ಒಳ್ಳೆಯದು.
ಮತ್ಸ್ಯಾಸನ ಅಭ್ಯಾಸದಿಂದ ಕುತ್ತಿಗೆ, ಹೊಟ್ಟೆ ಮತ್ತು ಅನೇಕ ವಿಕಾರಗಳು ದೂರವಾಗುವುವು.
ಉಷ್ಟ್ರಾಸನ: ಈ ಒಂಟೆ ಭಂಗಿ ಬಾಗಿರುವ ಬೆನ್ನನ್ನು ಸರಿ ಪಡಿಸುವಲ್ಲಿ ಸಹಾಯಕವಾಗಿದೆ.
ಬೆಕ್ಕು-ಹಸು ಭಂಗಿ: ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.