ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ವಾಣಿ ಜಯರಾಂ ಇಂದು (ಫೆ. 04) ಕೊನೆಯುಸಿರೆಳೆದಿದ್ದಾರೆ.
ತನ್ನ ಸಿರಿ ಕಂಠದ ಮೂಲಕ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಗಾಯಕಿ ವಾಣಿ ಜಯರಾಂ.
ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು, ಹಿಂದಿ ಇನ್ನೂ ಭಾರತೀಯ ಹಲವು ಭಾಷೆಯ ಸಿನಿಮಾಗಳಿಗೆ ಹಾಡು ಹಾಡಿದ ಹೆಗ್ಗಳಿಕೆ ಇವರಿಗಿದೆ.
ಸಂಗೀತ ಲೋಕದಲ್ಲಿ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಇತ್ತೀಚೆಗಷ್ಟೇ ಕೇಂದ್ರ ಸರಕಾರ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮ ಭೂಷಣವನ್ನೂ ಘೋಷಿಸಿದೆ.
ಇಡೀ ಕುಟುಂಬ ಸಂಗೀತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. ಇವರ ತಾಯಿ ಪ್ರಸಿದ್ಧ ಸಂಗೀತ ವಿದ್ವಾಂಸ, ರಂಗ ರಾಮಾನುಜ ಅಯ್ಯಂಗಾರ್ರವರ ಶಿಷ್ಯೆ.
ಕನ್ನಡದಲ್ಲಿ ಡಾ.ರಾಜ್ ಕುಮಾರ್, ಅನಂತ್ ನಾಗ್,ವಿಷ್ಣುವರ್ಧನ್, ಅಂಬರೀಶ್ ಮುಂತಾದ ಮೇರು ನಟರ ಚಿತ್ರಗಳಿಗೆ ಹಾಡು ಹಾಡಿದ ಹೆಮ್ಮೆಯ ಗಾಯಕಿ.
ಮಲಯ ಮಾರುತ, ಶಿವ ಮೆಚ್ಚಿದ ಕಣ್ಣಪ್ಪ, ಒಲವಿನ ಉಡುಗೊರೆ, ಅನುಭವ ಹೀಗೆ ಕನ್ನಡದ 50 ಹೆಚ್ಚು ಚಿತ್ರಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ.