ಕೂದಲಿನ ಆರೈಕೆಯಲ್ಲಿ ಮೊಸರು ಬಳಸುವ ಸರಿಯಾದ ವಿಧಾನ
ಕೂದಲಿಗೆ ಮೊಸರು ಹಚ್ಚುವುದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ.
ಮೊಟ್ಟೆಯೊಂದಿಗೆ ಮೊಸರನ್ನು ಸೇರಿಸಿ ಕೂದಲಿಗೆ ಹಚ್ಚಿ, ಇದು ಕೂದಲಿಗೆ ನೆತ್ತಿಯಿಂದಲೇ ಪೋಷಣೆ ನೀಡುತ್ತದೆ.
ಜೇನುತುಪ್ಪ ಹಾಗೂ ಮೊಸರಿನ ಮಿಶ್ರಣ ಕೂದಲು ಉದುರುವಿಕೆ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ.
ಮೊಸರಿನೊಂದಿಗೆ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ.
ತೆಂಗಿನ ಎಣ್ಣೆ ಹಾಗೂ ಮೊಸರು ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಬಾದಾಮಿ ಎಣ್ಣೆ ಹಾಗೂ ಮೊಸರು ಕೂದಲಿಗೆ ಪೋಷಣೆ ನೀಡುವಲ್ಲಿ ಮತ್ತೊಂದು ಉತ್ತಮ ಔಷಧಿ.
ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಹಾಗೂ ಮೊಸರಿನಲ್ಲಿ ಪ್ರೋಬಯಾಟಿಕ್ ಅಂಶ ಸಮೃದ್ಧವಾಗಿದೆ.
ಆದ್ದರಿಂದ ಈ ಸಿಂಪಲ್ ಮನೆಮದ್ದು ಬಳಸಿ ಹೊಳೆಯುವ ಕೂದಲನ್ನು ಪಡೆಯಿರಿ.