ನಗದು ವಹಿವಾಟಿಗೆ ಆದಾಯ ತೆರಿಗೆ ಇಲಾಖೆ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಆ ಕುರಿತು ಇಲ್ಲಿದೆ ಮಾಹಿತಿ.

ಒಂದು ಬಾರಿಗೆ 50,000 ರೂ.ಗಿಂತ ಹೆಚ್ಚು ಮೊತ್ತ ಠೇವಣಿ ಇಡುವುದಾದರೆ, ವಿತ್​​ಡ್ರಾ ಮಾಡುವುದಾದರೆ ಪ್ಯಾನ್ ಸಂಖ್ಯೆ ನೀಡುವುದು ಕಡ್ಡಾಯ.

ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂ. ನಗದನ್ನು ಠೇವಣಿ ಇಡುವುದಾದರೆ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನೀಡಬೇಕು.

2 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ನಗದು ನೀಡಿ ವಸ್ತುಗಳನ್ನು ಖರೀದಿಸುವುದು ಅಥವಾ ಶಾಪಿಂಗ್ ಮಾಡುವಂತಿಲ್ಲ.

ಒಂದು ವೇಳೆ 2 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ನಗದು ನೀಡಿ ವಸ್ತುಗಳನ್ನು ಖರೀದಿಸುವುದಾದರೆ ಪ್ಯಾನ್ ಮತ್ತು ಆಧಾರ್ ಕಾರ್ಡ್​ ವಿವರ ಸಲ್ಲಿಸಬೇಕಾಗುತ್ತದೆ.

ನಗದು ರೂಪದಲ್ಲಿ ದೇಣಿಗೆ ಅಥವಾ ದಾನ ಮಾಡುವ ಮಿತಿಯನ್ನು 2,000 ರೂ.ಗೆ ಸೀಮಿತಗೊಳಿಸಲಾಗಿದೆ.

ಬ್ಯಾಂಕ್ ಖಾತೆಯಿಂದ 2 ಕೋಟಿ ರೂ. ವಿತ್​​ಡ್ರಾ ಮಾಡುವುದಾದರೆ ಟಿಡಿಎಸ್ ಪಾವತಿಸಬೇಕಾಗುತ್ತದೆ.