ಮಳೆಗಾಲಕ್ಕೆ ಆರೋಗ್ಯಕರ ಆಹಾರಗಳು
ಮಳೆಗಾಲ ಬಂತೆಂದರೆ ಸಾಕು, ಗರಿ ಗರಿಯಾದ ತಿಂಡಿಗಳ ಕಡೆ ಹೆಚ್ಚು ಆಕರ್ಷರಾಗುತ್ತೇವೆ.
ಆದ್ದರಿಂದ ಮಳೆಗಾಲದಲ್ಲಿ ಸೇವಿಸಬಹುದಾದ ಆರೋಗ್ಯಕರ ಆಹಾರಗಳ ಕುರಿತು ಮಾಹಿತಿ ಇಲ್ಲಿದೆ.
ಬೇಯಿಸಿದ ಜೋಳ: ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು.
ಇಡ್ಲಿ ಚಾಟ್: ಸಾಮಾನ್ಯವಾಗಿ ಇಡ್ಲಿಯನ್ನು ತಿನ್ನುವುದಕ್ಕಿಂತ ಒಗ್ಗರಣೆ ಹಾಕಿ ಚಾಟ್ ರೂಪದಲ್ಲಿ ಸೇವಿಸಿ.
ಹಣ್ಣಿನ ಸಲಾಡ್: ಮಳೆಗಾಲದಲ್ಲಿ ಬಿಸಿ ಬಿಸಿ ಆಹಾರದ ಹೊರತಾಗಿಯೂ ಆರೋಗ್ಯಕರ ಹಣ್ಣಿನ ಸಲಾಡ್ ಸೇವಿಸಿ.
ಹುರಿದ ಕಡಲೆ: ಗರಿ ಗರಿಯಾಗಿ ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.
ಬೆರ್ರಿ ಹಣ್ಣಿನ ಜೊತೆ ಮೊಸರು: ಉತ್ಕರ್ಷಣ ನಿರೋಧಕಗಳು ಮತ್ತು ಪೌಷ್ಟಿಕಾಂಶಗಳು ಸಮೃದ್ಧವಾಗಿದೆ.