ಈ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಹಾಗೂ ರಕ್ತ ಹೀನತೆಯನ್ನು ತಡೆಗಟ್ಟಲು ಮನೆಯಲ್ಲಿಯೇ ಪ್ರೋಟೀನ್ ಲಡ್ಡು ತಯಾರಿಸಿ.
ಬೇಕಾಗುವ ಸಾಮಾಗ್ರಿಗಳು: ಶೇಂಗಾ, ಗೋಡಂಬಿ,ಎಳ್ಳು, ಬಾದಾಮಿ, ಪಿಸ್ತಾ, ಕುಂಬಳಕಾಯಿ ಹಾಗೂ ಸೂರ್ಯಕಾಂತಿ ಬೀಜ, ತೆಂಗಿನ ತುರಿ, ಬೆಲ್ಲ ಮತ್ತು ನೀರು.
ಮೊದಲಿಗೆ ಶೇಂಗಾ ಬೀಜವನ್ನು 2ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.
ಈ ಹುರಿದ ಶೇಂಗಾ ಬೀಜದ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಪುಡಿಮಾಡಿ. ನಂತರ ಎಳ್ಳನ್ನು ಕೂಡ ಅದೇ ರೀತಿ ಹುರಿದು ಪುಡಿ ಮಾಡಿ.
ನಂತರ ಮೇಲೆ ಗೋಡಂಬಿ,ಬಾದಾಮಿ, ಪಿಸ್ತಾ, ಕುಂಬಳಕಾಯಿ ಹಾಗೂ ಸೂರ್ಯಕಾಂತಿ ಬೀಜಗಳನ್ನು 5ನಿಮಿಷಗಳ ಕಾಲ ಹುರಿದು ಪುಡಿ ಮಾಡಿ.
ಕೊನೆಯದಾಗಿ ತೆಂಗಿನ ಕಾಯಿ ತುರಿಯನ್ನು 2ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಹುರಿದು, ನೀರು ಹಾಕದೇ ಮಿಕ್ಸಿಯಲ್ಲಿ ಪುಡಿಮಾಡಿ.
ಒಂದು ಪ್ಯಾನ್ನಲ್ಲಿ ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಪಾಕ ತಯಾರಿಸಿ. 4ರಿಂದ 5 ನಿಮಿಷಗಳ ವರೆಗೆ ಕಡಿಮೆ ಉರಿಯಲ್ಲಿರಲಿ.
ಪಾಕ ಕುದಿಯುತ್ತಿರುವಾಗಲೇ ಈಗಾಗಲೇ ಮಾಡಿಟ್ಟ ಪುಡಿಗಳನ್ನು ಸೇರಿಸಿ, 4 ನಿಮಿಷಗಳ ಕಾಲ ತಳ ಹಿಡಿಯದಂತೆ ಕೈಯಾಡಿಸಿ.
ಒಲೆಯಿಂದ ಕೆಳಗಿಳಿಸಿ ಮತ್ತು ತಣ್ಣಗಾದ ಮೇಲೆ ಉಂಡೆ ಕಟ್ಟಿ. ಈಗ ಪ್ರೋಟೀನ್ ಲಡ್ಡು ಸಿದ್ದವಾಗಿದೆ.