ಬಾಣಂತಿರ ಕೂದಲಿನ ಆರೈಕೆಗೆ ಸಲಹೆಗಳು ಇಲ್ಲಿವೆ
ಉಗುರು ಬೆಚ್ಚಗಿನ ಎಣ್ಣೆಯಲ್ಲಿ ಕೂದಲು ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.
ಹೆರಿಗೆಯ ನಂತರ ಕೆಲವು ದಿನಗಳ ವರೆಗೆ ಬಿಗಿಯಾಗಿ ಕೂದಲನ್ನು ಕಟ್ಟದಿರಿ.
ಹೇರ್ ಮಾಸ್ಕ್ ಬಳಸಿ. ಇದು ಕೂದಲಿಗೆ ನೆತ್ತಿಯಿಂದಲೇ ಪೋಷಣೆಯನ್ನು ನೀಡುತ್ತದೆ.
ಹೆಚ್ಚು ಶ್ಯಾಂಪು ಬಳಸಿ ಕೂದಲನ್ನು ತೊಳೆಯಬೇಡಿ ಇದು ಕೂದಲ ಹಾನಿಗೆ ಕಾರಣವಾಗಬಹುದು.
ಆದಷ್ಟು ಹೇರ್ ಸ್ಟೈಟ್ನರ್, ಕರ್ಲರ್ಗಳನ್ನು ಬಳಸುವುದನ್ನು ತಪ್ಪಿಸಿ.
ಮೃದುವಾದ ಬಾಚಣಿಕೆಯನ್ನು ಆಯ್ಕೆ ಮಾಡಿ. ಕೆಲವೊಂದು ಬಾಚಣಿಕೆ ಕೂದಲ ಎಳೆಗಳಿಗೆ ಹಾನಿಯುಂಟು ಮಾಡಬಹುದು.
ಹೆರಿಗೆಯ ನಂತರ ಸಮತೋಲಿತ ಆಹಾರಗಳ ಸೇವನೆ ಕೂದಲ ಬೆಳವಣೆಗೆಗೆ ಸಹಾಯ ಮಾಡುತ್ತದೆ.
ಕೆರಿಟೈನ್ ಹಿಡಿದು ಕೂದಲಿಗೆ ಕಲರಿಂಗ್ ಮಾಡುವ ಅಭ್ಯಾಸವನ್ನು ಕೆಲವು ತಿಂಗಳುಗಳ ವರೆಗೆ ತಪ್ಪಿಸಿ.