72ರ ವಯಸ್ಸಿನಲ್ಲೂ ಮೋದಿ ಫಿಟ್ ಆಗಿರಲು ಕಾರಣ ಏನು ಗೊತ್ತಾ?
ಇತ್ತೀಚೆಗಷ್ಟೇ (ಏ. 24) ಪ್ರಧಾನಿ ಮೋದಿ 36 ಗಂಟೆಗಳಲ್ಲಿ 8 ನಗರಗಳಲ್ಲಿ 7 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ತನ್ನ 72 ವಯಸ್ಸಿನಲ್ಲಿಯೂ ಫಿಟ್ ಆಗಿದ್ದು, ಬಿಡುವಿಲ್ಲದಂತೆ ಸಾಕಷ್ಟು ಪ್ರಯಾಣ ಬೆಳೆಸುತ್ತಿರುವುದನ್ನು ಕಾಣಬಹುದು.
ಪ್ರಧಾನಿ ಮೋದಿ ಈ ವಯಸ್ಸಿನಲ್ಲೂ ಇಷ್ಟೊಂದು ಫಿಟ್ ಆಗಿರಲು ಕಾರಣ ಅವರ ಜೀವನಶೈಲಿ.
ಹಲವು ವರ್ಷಗಳಿಂದ ಯೋಗಾಭ್ಯಾಸವು ನನ್ನ ಜೀವನದ ಅವಿಭಾಜ್ಯ ಅಂಗ ಎಂದು ಸ್ವತಃ ಪ್ರಧಾನಿ ಟ್ವೀಟ್ ಹಂಚಿಕೊಂಡಿದ್ದಾರೆ.
ಪ್ರಧಾನಿ ವಾರಕೊಮ್ಮೆ ಅಥವಾ 2ಬಾರಿ ಯೋಗ ನಿದ್ರಾ ಅಭ್ಯಾಸ ಮಾಡುತ್ತಾರೆ. ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯಕ.
ಪ್ರಧಾನಿಯ ಉಪಹಾರಕ್ಕೆ ಸಂಬಂಧಿಸಿದಂತೆ ಹಣ್ಣುಗಳಿಗೆ ಹೆಚ್ಚಿನ ಆದ್ಯತೆ, ಉಪಹಾರವನ್ನು ಬೆಳಗ್ಗೆ 9 ಗಂಟೆಯ ಒಳಗಾಗಿ ಪೂರ್ಣಗೊಳಿಸುತ್ತಾರೆ.
ಸಂದರ್ಶನವೊಂದರಲ್ಲಿ ಮೋದಿ ಅವರು ಪ್ರತೀದಿನ ಬೆಚ್ಚಗಿನ ನೀರು ಕುಡಿಯುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ಇದಲ್ಲದೇ, ರಾತ್ರಿ ಮಲಗುವ ಮುನ್ನ ಕೆಲವು ಹನಿ ಉಗುರು ಬೆಚ್ಚಗಿನ ಸಾಸಿವೆ ಎಣ್ಣೆಯನ್ನು ಮೂಗಿಗೆ ಹಾಕುತ್ತಾರೆ ಎಂದು ಹೇಳಿಕೊಂಡಿದ್ದಾರೆ.