ಗರ್ಭಾವಸ್ಥೆಯಲ್ಲಿ ಆಸ್ಟಿಯೊಪೊರೋಸಿಸ್ ಅಪಾಯಗಳು
ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರವೂ ಮಹಿಳೆಯರಲ್ಲಿ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಇಂತಹ ಸಮಸ್ಯೆ ಯಾಕೆ ಉಂಟಾಗುತ್ತದೆ ಮತ್ತು ಅದಕ್ಕೆ ಪರಿಹಾರ ಇಲ್ಲಿ ತಿಳಿದುಕೊಳ್ಳಿ.
ಗರ್ಭಾವಸ್ಥೆಯಲ್ಲಿ ಭ್ರೂಣದ ಆರೋಗ್ಯ ಹಾಗೂ ತಾಯಿಯ ಆರೋಗ್ಯಕ್ಕೆ ಸಾಕಷ್ಟು ಕ್ಯಾಲ್ಸಿಯಂನ ಅಗತ್ಯವಿರುತ್ತದೆ.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಹೆರಿಗೆಯಾದ ಕೆಲವೇ ವಾರಗಳಲ್ಲಿ ಆಸ್ಟಿಯೊಪೊರೋಸಿಸ್ ಅಪಾಯ ಕಂಡುಬರಬಹುದು.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಗರ್ಭಿಣಿಯರು ತೆಗೆದುಕೊಳ್ಳಬೇಕು.
ಡೈರಿ ಉತ್ಪನ್ನಗಳು, ಎಣ್ಣೆಯುಕ್ತ ಮೀನು, ಬೀಜ ಮತ್ತು ಸೊಪ್ಪು ತರಕಾರಿಗಳು ಕ್ಯಾಲ್ಸಿಯಂನ ಅತ್ಯುತ್ತಮ ಮೂಲಗಳಾಗಿವೆ.
ಕನಿಷ್ಟ 1000ಮಿಲಿಗ್ರಾಂನಷ್ಟು ಕ್ಯಾಲ್ಸಿಯಂ ಸೇವನೆ ಅಗತ್ಯ ಎಂದು ಸಾಕಷ್ಟು ಅಧ್ಯಯನಗಳಿಂದ ತಿಳಿದುಬಂದಿದೆ.
ಜೊತೆಗೆ ಮೂಳೆ ಬಲಿಷ್ಠವಾಗುವಂತಹ ವ್ಯಾಯಾಮ,ಧ್ಯಾನಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ.