ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ ಬ್ಯಾಂಕ್ಗಳ ಇತ್ತೀಚಿನ ಎಫ್ಡಿ ಬಡ್ಡಿ ದರ ವಿವರ ಇಲ್ಲಿದೆ.
ಆರ್ಬಿಐ ರೆಪೊ ದರ ಹೆಚ್ಚಿಸಿದಾಗ ಸಾಮಾನ್ಯವಾಗಿ ಬ್ಯಾಂಕ್ಗಳು ಎಫ್ಡಿ ದರ ಹೆಚ್ಚಿಸುತ್ತವೆ.
ಎಸ್ಬಿಐ ವಿವಿಧ ಅವಧಿಯ ಎಫ್ಡಿಗಳಿಗೆ 65 ಮೂಲಾಂಶದ ವರೆಗೆ ಬಡ್ಡಿ ನೀಡುತ್ತಿದೆ.
1 ವರ್ಷ ಮೇಲ್ಪಟ್ಟ, 2 ವರ್ಷಕ್ಕಿಂತ ಮೊದಲು ಮೆಚ್ಯೂರ್ ಆಗುವ ಎಫ್ಡಿಗೆ ಹಾಗೂ 2 ವರ್ಷ ಮೇಲ್ಪಟ್ಟ, 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿಗೆ ಶೇ 6.75ರ ಬಡ್ಡಿ ನೀಡಲಾಗುತ್ತಿದೆ.
3 ವರ್ಷ ಮೇಲ್ಪಟ್ಟ, 5 ವರ್ಷಕ್ಕಿಂತ ಮೊದಲು ಮೆಚ್ಯೂರ್ ಆಗುವ ಎಫ್ಡಿಗೆ ಹಾಗೂ 5 ವರ್ಷ ಮೇಲ್ಪಟ್ಟ, 10 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿಗೆ ಶೇ 6.25ರ ಬಡ್ಡಿ ನೀಡಲಾಗುತ್ತಿದೆ.
ಎಚ್ಡಿಎಫ್ಸಿ ಬ್ಯಾಂಕ್ ವಿವಿಧ ಅವಧಿಯ ಎಫ್ಡಿಗಳಿಗೆ ಶೇ 3ರಿಂದ 6.25ರ ವರೆಗೆ ಬಡ್ಡಿ ನೀಡುತ್ತಿದೆ.
ಹಿರಿಯ ನಾಗರಿಕರ 3 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಎಫ್ಡಿಗಳಿಗೆ ಶೇ 3.5ರಿಂದ 7ರ ವರೆಗೆ ಬಡ್ಡಿ ನೀಡುತ್ತದೆ.
3 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಎಫ್ಡಿಗಳಿಗೆ ಐಸಿಐಸಿಐ ಬ್ಯಾಂಕ್ ಶೇ 3ರಿಂದ 6.60 ವರೆಗೆ ಬಡ್ಡಿ ನೀಡುತ್ತಿದೆ.