ಕಿವಿ ಹಣ್ಣಿನಲ್ಲಿ ಪೋಷಕಾಂಶಗಳು ಸಮೃದ್ದವಾಗಿವೆ.
ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಕೆ ಹಾಗೂ ವಿಟಮಿನ್ ಬಿ6 ಹೇರಳವಾಗಿರುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಮಧುಮೇಹ, ಹೃದ್ರೋಗ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಕಿವಿ ಹಣ್ಣು ಉತ್ತಮ ಪರಿಹಾರವಾಗಿದೆ.
ದೇಹದಲ್ಲಿನ ಅತಿಯಾದ ಕೊಬ್ಬನ್ನು ಅಂದರೆ ತೂಕ ನಷ್ಟಕ್ಕೆ ಕಿವಿ ಹಣ್ಣು ಉತ್ತಮ ಮನೆಮದ್ದು.
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಿವಿ ಹಣ್ಣು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಕಿವಿ ಹಣ್ಣಿನ ಸೇವನೆ ನಿಮ್ಮ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ ಹಾಗೂ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.
ಕಿವಿ ಹಣ್ಣು ಮಧುಮೇಹ ರೋಗಿಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಇದು ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.