ಅಂಚೆ ಇಲಾಖೆಯ 'ಕಿಸಾನ್ ವಿಕಾಸ್ ಪತ್ರ'ವು ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ.
ಇದರಲ್ಲಿ ಹೂಡಿಕೆದಾರರ ಹಣ 10 ವರ್ಷ 2 ತಿಂಗಳಿನಲ್ಲಿ ಇಮ್ಮಡಿಯಾಗಬಹುದು.
ಈ ಯೋಜನೆಗೆ ವಾರ್ಷಿಕ ಶೇ. 6.9 ಬಡ್ಡಿ ಸಿಗುತ್ತದೆ. ಕನಿಷ್ಠ 1000 ರೂ. ಹಣ ಹೂಡಿಕೆ ಮಾಡಬೇಕು.
124 ತಿಂಗಳುಗಳಲ್ಲಿ(10 ವರ್ಷ 2 ತಿಂಗಳು) ನಿಮ್ಮ ಹೂಡಿಕೆ ಇಮ್ಮಡಿಯಾಗುತ್ತದೆ.
ಭಾರತೀಯ ನಾಗರಿಕರು ಹಣ ಹೂಡಿಕೆ ಮಾಡಬಹುದು. ಕನಿಷ್ಠ 18 ವರ್ಷ ಆಗಿರಬೇಕು.
ಇದು ಅತ್ಯಂತ ಸುರಕ್ಷಿತ ಸಾಧನವಾಗಿದೆ. ಮಾರುಕಟ್ಟೆಯ ಏರಿಳಿತಗಳು ಇದಕ್ಕೆ ಅಡ್ಡಿಯಾಗುವುದಿಲ್ಲ.