ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಜುಮ್ಕಾ
ಇತ್ತೀಚಿನ ದಿನಗಳಲ್ಲಿ ನಟಿಯರು ಕೂಡ ಜುಮ್ಕಾ ಧರಿಸುವುದರಿಂದ ಸಾಕಷ್ಟು ಟ್ರೆಂಡಿಯಾಗುತ್ತಿದೆ.
ಸಾಮಾನ್ಯವಾಗಿ ಜುಮ್ಕಾಗಳನ್ನು ಸಂಪ್ರದಾಯಿಕ ಉಡುಗೆಗಳೊಂದಿಗೆ ಧರಿಸಲಾಗುತ್ತದೆ.
ಇದು ನಿಮ್ಮ ಅಂದವನ್ನು ಹೆಚ್ಚಿಸುವುದಲ್ಲದೇ, ನಿಮ್ಮ ಲುಕ್ ಬದಲಾಯಿಸುತ್ತದೆ.
ಭಾರತೀಯ ಮದುವೆಯ ಸಮಾರಂಭಗಳಲ್ಲಿ ಸಂಪ್ರಾದಾಯಿಕ ಶೈಲಿಯ ಜುಮ್ಕಾ ಬಳಸಲಾಗುತ್ತದೆ.
ಸೀರೆ, ಲೆಹಾಂಗ ಮುಂತಾದ ಉಡುಪುಗಳಿಗೆ ಜುಮ್ಕಾ ಉತ್ತಮ ಆಯ್ಕೆಯಾಗಿದೆ.
ಕೆಲವೊಂದು ಜುಮ್ಕಾ ನೋಡುವಾಗ ಭಾರದಂತೆ ಕಂಡರೂ ಕೂಡ ಅತಿ ತೆಳುವಾಗಿ ವಿನ್ಯಾಸಗೊಳಿಸಲಾಗಿರುತ್ತದೆ.
ಚಿನ್ನ, ಬೆಳ್ಳಿ,ವಜ್ರ ಮತ್ತು ಮುತ್ತುಗಳಿಂದ ವಿನ್ಯಾಸಗೊಳಿಸಲಾದ ಸಾಕಷ್ಟು ದುಬಾರಿ ಬೆಲೆ ಜುಮ್ಕಾಗಳು ಕೂಡ ಇವೆ.