ಯೋಗಾಭ್ಯಾಸದಿಂದ ಮುಟ್ಟಿನ ಸಮಯದಲ್ಲಾಗುವ ಬದಲಾವಣೆ ತಿಳಿದುಕೊಳ್ಳಿ
ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಸಾಕಷ್ಟು ಪ್ರಯೋಜನವನ್ನು ಹೊಂದಿದೆ.
ಮುಟ್ಟಿನ ಸಮಯದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ.
ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಬದಲಾವಣೆಯಿಂದಾಗಿ ಸಾಕಷ್ಟು ಕಿರಿಕಿರಿಯುಂಟಾಗುತ್ತದೆ.
ನೀವು ಪ್ರತಿದಿನ ಕೆಲವೊಂದಿಷ್ಟು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಮುಟ್ಟಿನ ಸಮಯದ ಕಿರಿಕಿರಿಯಿಂದ ಮುಕ್ತಿ ಪಡೆಯಬಹುದು.
ಕಿಬ್ಬೊಟ್ಟೆಯ ನೋವು ಹಾಗೂ ಸೆಳೆತಗಳಿಗೂ ನೀವು ಕೆಲ ಯೋಗ ಭಂಗಿಗಳಿಂದ ಚಿಕಿತ್ಸೆ ಪಡೆದುಕೊಳ್ಳಬಹುದು.
ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಪ್ರಾಣಾಯಾಮಗಳನ್ನು ಅಭ್ಯಾಸಿಸಿ.