ಟ್ರೇಡಿಂಗ್ ಖಾತೆಯನ್ನು ಸುರಕ್ಷಿತವಾಗಿಡುವ ಆರು ವಿಧಾನಗಳನ್ನು ಇಲ್ಲಿ ನೀಡಲಾಗಿದೆ.
ಅಪ್ಪರ್ಕೇಸ್, ಲೋವರ್ ಕೇಸ್, ನಂಬರ್ ಮತ್ತು ಸ್ಪೆಷಲ್ ಕ್ಯಾರಕ್ಟರ್ ಒಳಗೊಂಡ ಸ್ಟ್ರಾಂಗ್ ಪಾಸ್ವರ್ಡ್ ಬಳಸಿ.
ಫಿಂಗರ್ ಪ್ರಿಂಟ್ ಅಥವಾ ಮೊಬೈಲ್ ಗೆ ಕೋಡ್ ಬರುವ ಎರಡು ಹಂತದ ದೃಢೀಕರಣ ಆಯ್ಕೆ ಮಾಡಿ.
ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಅಪ್ ಡೇಟ್ ಆಗಿರುವಂತೆ ನೋಡಿಕೊಳ್ಳಿ.
ವೈಯಕ್ತಿಕ ವಿವರ ಕೇಳಿಕೊಂಡು ಬರುವ ಅನುಮಾನಾಸ್ಪದ ಇ-ಮೇಲ್, ಎಸ್ಎಂಎಸ್ಗಳ ಬಗ್ಗೆ ಎಚ್ಚರ ಇರಲಿ.
ಟ್ರೇಡಿಂಗ್ ಖಾತೆಯನ್ನು ಆಗಾಗ ಪರಿಶೀಲಿಸುತ್ತಿರಿ. ಅನಧಿಕೃತ ಟ್ರೇಡಿಂಗ್ ನಡೆದಿದೆಯೇ ಎಂಬುದನ್ನು ಗಮನಿಸಿ.
ಸುರಕ್ಷಿತ ಖಾತೆಗಾಗಿ ಪ್ರತಿಷ್ಠಿತ ಕಂಪನಿ ಅಥವಾ ಮಧ್ಯವರ್ತಿಗಳನ್ನೇ ಆಯ್ದುಕೊಳ್ಳಿ.