ಮೆಲನಿನ್ ಎಂದರೇನು? ಇದು ಕಡಿಮೆಯಾದರೆ ಆಗುವ ತೊಂದರೆಗಳೇನು?
ಇಂದಿನ ಬದಲಾದ ಜೀವನಶೈಲಿಯಲ್ಲಿ, ಒತ್ತಡ ಹಾಗೂ ಆಹಾರ ಕ್ರಮದಿಂದಾಗಿ ಕೂದಲಿನ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ.
ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತಿದ್ದರೆ, ಈ ಸಮಸ್ಯೆಗೆ ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಮೆಲನಿನ್ ಕೂದಲಿಗೆ ಬಣ್ಣವನ್ನು ನೀಡುವ ರಾಸಾಯನಿಕವಾಗಿದೆ. ಪಿಗ್ಮೆಂಟ್ ಕೋಶವು ಮೆಲನಿನ್ ಅನ್ನು ಉತ್ಪಾದಿಸುವುದನ್ನು ನಿಲ್ಲಿಸಿದಾಗ ಕೂದಲು ಬೆಳ್ಳಗಾಗುತ್ತದೆ.
ದಾಸವಾಳ ಹೂವಿನಲ್ಲಿರುವ ವಿಟಮಿನ್, ಫ್ಲೆವನಾಯ್ಡ್ಗಳು ಕೂದಲ ಆರೋಗ್ಯವನ್ನು ಕಾಪಾಡಿ, ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಭೃಂಗರಾಜ ಎಣ್ಣೆಯು ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಕೂದಲಿಗೆ ಬಣ್ಣ ನೀಡಲು ಸಹಾಯಕವಾಗಿದೆ.
ಚಿಕ್ಕ ವಯಸ್ಸಿಗೆ ಬಿಳಿ ಬಣ್ಣಕ್ಕೆ ತಿರುಗುವುದು, ಸೀಳು ಕೂದಲು ಇಂತಹ ಹಲವಾರು ಸಮಸ್ಯೆಗಳಿಗೆ ತ್ರಿಫಲ ರಾಮಬಾಣವಾಗಿದೆ.