ಮಲಬದ್ಧತೆಯಿಂದ ಬಳಲುತ್ತಿದ್ದರೆ ಈ ಆಹಾರಗಳ ಸೇವನೆ ತಪ್ಪಿಸಿ
ಸೇವಿಸಿದ ಆಹಾರ ಜೀರ್ಣವಾಗದೆ ಉಳಿದುಕೊಂಡಾಗ ಮಲಬದ್ದತೆ ಸಮಸ್ಯೆ ಕಾಡುತ್ತದೆ.
ಆಹಾರ ಸೇವನೆ ಹಾಗೂ ಜೀವನ ಶೈಲಿ ಮಲಬದ್ಧತೆಗೆ ಮುಖ್ಯ ಕಾರಣವಾಗುತ್ತದೆ.
ಆದ್ದರಿಂದ ಮಲಬದ್ಧತೆಯಿಂದ ಬಳಲುತ್ತಿದ್ದರೆ ಈ ಆಹಾರಗಳ ಸೇವನೆ ತಪ್ಪಿಸಿ.
ಪಾಸ್ತಾ ತಿನ್ನುವುದು ಮಲಬದ್ಧತೆ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.
ಕರಿದ ಆಹಾರಗಳ ಸೇವನೆ ಮತ್ತಷ್ಟು ಅಜೀರ್ಣ ಸಮಸ್ಯೆಗೆ ಕಾರಣವಾಗಬಹುದು.
ಬ್ರೆಡ್: ಹೆಚ್ಚು ಕಾರ್ಬೋಹೈಡ್ರೇಟ್ಗಳಿಂದ ತಯಾರಿಸಲಾಗುವುದರಿಂದ ಮಲಬದ್ಧತೆ ಸಮಸ್ಯೆ ಹೆಚ್ಚಾಗಬಹುದು.
ಬಾಳೆಕಾಯಿ: ಸಾಕಷ್ಟು ನಿರೋಧಕ ಪಿಷ್ಟವನ್ನು ಹೊಂದಿರುವುದರಿಂದ ಮಲಬದ್ಧತೆಯನ್ನು ಉಲ್ಬಣಗೊಳಿಸಬಹುದು.