ದೇಹದಲ್ಲಿ ಕಬ್ಬಿನಾಂಶ ಹೆಚ್ಚಿಸುವ ಪಾನೀಯಗಳಿವು
ಕಬ್ಬಿನಾಂಶವು ದೇಹದ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಒಂದು ರೀತಿಯ ಪ್ರೋಟೀನ್.
ದೇಹದಲ್ಲಿ ಕಬ್ಬಿನಾಂಶದ ಕೊರತೆಯುಂಟಾದರೆ ರಕ್ತಹೀನತೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ.
ಕಬ್ಬಿನಾಂಶಗಳು ಸಮೃದ್ಧವಾಗಿರುವ ಪ್ರಮುಖ ಆಹಾರಗಳ ಕುರಿತು ಮಾಹಿತಿ ಇಲ್ಲಿದೆ.
ಸೌತೆ ಕಾಯಿ, ಪಾಲಕ್ ಸೊಪ್ಪು, ನಿಂಬೆ ಹಾಗೂ ಶುಂಠಿಯ ಪಾನೀಯ ಕಬ್ಬಿನಾಂಶದ ಉತ್ತಮ ಮೂಲವಾಗಿದೆ.
ಈ ಹಸಿರು ತರಕಾರಿಗಳ ಪಾನೀಯವು ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮಿಟಮಿನ್ ಎ,ಬಿ, ಕೆ ಗಳನ್ನು ಹೊಂದಿದೆ.
ಕೆಂಪು ಮಾಂಸ, ಪಾಲಕ್ ಸೊಪ್ಪು, ಎಲೆಕೋಸು, ಧಾನ್ಯಗಳು, ಬೀನ್ಸ್ ಹಾಗೂ ಬಟಾಣಿಗಳಲ್ಲಿ ಕಬ್ಬಿಣಾಂಶ ಹೇರಳವಾಗಿದೆ.
ಬೆರ್ರಿ ಹಣ್ಣು, ಗೋಡಂಬಿ ಹಾಕಿ ಸ್ಮೂಥಿ ತಯಾರಿಸಿ ಸವಿಯಿರಿ. ಇದು ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.