ಚಳಿಗಾಲದಲ್ಲಿ ಒಣ ತಲೆಹೊಟ್ಟು
ನಿಭಾಯಿಸುವ ವಿಧಾನ
ಆಲಿವ್ ಎಣ್ಣೆ: ಈ ಎಣ್ಣೆಯಲ್ಲಿರುವ ಪದಾರ್ಥಗಳು ಒಡೆದ ಮತ್ತು ಒಣ ಕೂದಲಿಗೆ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೂದಲು ಮತ್ತು ನೆತ್ತಿಯನ್ನು ಪೋಷಿಸಲು ಸಹಾಯ ಮಾಡುತ್ತದೆ.
ಬಾದಾಮಿ ಎಣ್ಣೆ: ವಿಟಮಿನ್ ಇ, ಮೆಗ್ನೇಸಿಯಮ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಈ ಎಣ್ಣೆ ಕೂದಲು ಪೋಷಿಸಲು, ಬಲಪಡಿಸಲು ಸಹಾಯ ಮಾಡುತ್ತದೆ.
ಎಳ್ಳು ಎಣ್ಣೆ: ಒಮೆಗಾ 3, 6, 9 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದು ಚಳಿಗಾಲದಲ್ಲಿ ಒಣ ನೆತ್ತಿಯ ಸಮಸ್ಯೆಯನ್ನು ದೂರ ಮಾಡುತ್ತದೆ.
ಲೋಳೆಸರ: ಅಲೋವೆರಾ ಚರ್ಮದ ಕಿರಿಕಿರಿ ಕಡಿಮೆ ಮಾಡಲು ಮತ್ತು ನೆತ್ತಿ ಸಮಸ್ಯೆಯನ್ನು ಶಮನಗೊಳಿಸಲು ಸಹಕಾರಿಯಾಗಿದೆ.
ಬಿಸಿ ನೀರಿನ ಸ್ನಾನ ಕಡಿಮೆ ಮಾಡಿ, ಬಿಸಿ ನೀರಿನ ಸ್ನಾನ ನೆತ್ತಿ ಮತ್ತು ಚರ್ಮದ ಆರೋಗ್ಯಕ್ಕೆ ಹಾನಿಕಾರಕವಾಗಿದೆ.