ಅರಿಶಿನ ಹಾಲು ಸೇವನೆ
ಪ್ರಯೋಜನಗಳು
ರಕ್ತ ಶುದ್ದೀಕರಣ: ಅರಿಶಿನ ಹಾಲು ಉತ್ತಮ ರಕ್ತ ಶುದ್ದೀಕಾರಿಯಾಗಿದೆ. ಇದು ನಿಮ್ಮ ರಕ್ತವನ್ನು ಶುದ್ದೀಕರಿಸುತ್ತದೆ ಮತ್ತು ಕಲ್ಮಶವನ್ನು ತೆಗೆದು ಹಾಕುತ್ತದೆ.
ಮೂಳೆಯ ಆರೋಗ್ಯ: ಅರಿಶಿನವು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದು ಮೂಳೆಯ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಋತು ಚಕ್ರದ ನೋವು: ಅರಿಶಿನ ಹಾಲು ಸೇವಿಸುವುದರಿಂದ ಮುಟ್ಟಿನ ಸೆಳೆತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
ಕೀಲು ನೋವು: ಅರಿಶಿನ ಹಾಲು ಸೇವನೆಯಿಂದ ಕೀಲು ನೋವು ಕಡಿಮೆ ಮಾಡಬಹುದು. ಸಂಧಿವಾತದಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ.
ತಯಾರಿಸುವ ವಿಧಾನ
ಅರಿಶಿನ ಹಾಲು ತಯಾರಿಸುವುದು ತುಂಬಾ ಸುಲಭ. ಬಾಣಲೆಗೆ ಒಂದು ಲೋಟ ಹಾಲು ಮತ್ತು ಒಂದು ಚಿಟಿಕೆ ಅರಿಶಿನ ಪುಡಿ ಹಾಕಿ ಕುದಿಸಬೇಕು. ನಂತರ ತಣಿಸಿ ಕುಡಿದರೆ ಆಯ್ತು.