ಪ್ರತಿದಿನ ಖರ್ಜೂರ ತಿನ್ನುವುದರಿಂದ ವಿಶೇಷವಾಗಿ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಸಹಾಯಕವಾಗಿದೆ.
ಖರ್ಜೂರ ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಖರ್ಜೂರ ಫೈಬರ್ ಮತ್ತು ವಿಟಮಿನ್ ಸಿ ಸಮೃದ್ದವಾಗಿರುವುದರಿಂದ ದೇಹಕ್ಕೆ ಬೇಕಾಗುವ ಕಬ್ಬಿಣಾಂಶವನ್ನು ನೀಡುತ್ತದೆ.
ಪ್ರತಿದಿನ ಖರ್ಜೂರ ತಿನ್ನುವುದರಿಂದ ಶೀತ , ಕೆಮ್ಮು ಹಾಗೂ ನೆಗಡಿಯಂತಹ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
ಖರ್ಜೂರದಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್, ರಂಜಕ, ತಾಮ್ರ, ಮೆಗ್ನೀಸಿಯಮ್ ಸಮೃದ್ದವಾಗಿದೆ.
ಮೂಳೆಗಳ ಆರೋಗ್ಯ ಹಾಗೂ ಮೂಳೆಗಳನ್ನು ಸದೃಡವಾಗಿರಿಸಲು ಪ್ರತಿದಿನ ಖರ್ಜೂರವನ್ನು ಸೇವಿಸಿ.
ಮಧುಮೇಹ ರೋಗಿಗಳಿಗೆ ಖರ್ಜೂರವು ತುಂಬಾ ಪ್ರಯೋಜನಕಾರಿಯಾಗಿದೆ.