ನಿಮ್ಮ ಸ್ನೇಹಿತರಿಗೆ ಈ ಉಡುಗೊರೆಗಳನ್ನು ನೀಡಿ

ಈ ವರ್ಷ(2023) ವಿಶ್ವ ಸ್ನೇಹಿತರ ದಿನವನ್ನು ಆಗಸ್ಟ್​​​​ 6ರಂದು ಆಚರಿಸಲಾಗುತ್ತಿದೆ. 

ಈ ವಿಶೇಷ ದಿನದಂದು ನಿಮ್ಮ ಸ್ನೇಹಿತರಿಗೆ ಉಡುಗೊರೆ ನೀಡಲು ಬಯಸಿದರೆ ಇಲ್ಲಿದೆ ಟಿಪ್ಸ್​​​

ನೀವು ದುಬಾರಿ ಉಡುಗೊರೆಗಳನ್ನು ನೀಡುವುದಕ್ಕಿಂತ ನೀವೇ ವಿಶಿಷ್ಟವಾಗಿ ತಯಾರಿಸಿ ನೀಡುವುದು ಉತ್ತಮವಾಗಿದೆ. 

ನೀವೇ ಫ್ರೆಂಡ್​​​ಶಿಪ್​​ ಕಾರ್ಡ್​ ತಯಾರಿಸಿ, ನೀವು ಅವರೊಂದಿಗೆ ಕಳೆದ ಸುಂದರ ಕ್ಷಣಗಳ ನೆನಪುಗಳನ್ನು ಬರೆಯಿರಿ. 

ಬಗೆ ಬಗೆಯ ಹೂವುಗಳಿರುವ ಹೂವಿನ ಗುಚ್ಛವನ್ನು ನೀವೇ ತಯಾರಿಸಿ ನಿಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ.

ನಿಮ್ಮ ಸ್ನೇಹಿತರೊಂದಿಗೆ ಕಳೆದ ಅಪರೂಪದ ಫೋಟೋಗಳನ್ನೆಲ್ಲಾ ಸೇರಿಸಿ, ಫೋಟೋ ಫ್ರೇಮ್​​ ಉಡುಗೊರೆಯಾಗಿ ನೀಡಿ.

ನಿಮ್ಮ ಸ್ನೇಹಿತರು ಪ್ರವಾಸವನ್ನು ಹೆಚ್ಚು ಇಷ್ಟ ಪಡುವವರಾಗಿದ್ದಾರೆ, ಒಂದು ಸುಂದರ ಪ್ರವಾಸಿ ತಾಣಕ್ಕೆ ಕರೆದುಕೊಂಡು ಹೋಗಿ.