ಮಕ್ಕಳು ವೇಗವಾಗಿ, ಎತ್ತರವಾಗಿ ಬೆಳೆಯಬೇಕೆ? ಇಲ್ಲಿದೆ ಸಿಂಪಲ್ ಟಿಪ್ಸ್
ಮಕ್ಕಳ ಬೆಳವಣಿಗೆಗೆ ಹಾಗೂ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಸಹಕಾರಿ. ಇದು ಅವರ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.
ಮಕ್ಕಳ ಬೆಳವಣಿಗೆಗೆ ಸಹಾಯಕವಾಗುವ ಚಟುವಟಿಕೆಗಳ ಪಟ್ಟಿ ಇಲ್ಲಿದೆ
ಸ್ಟ್ರೆಚಿಂಗ್ ವ್ಯಾಯಾಮಗಳು: ಇದು ಮಕ್ಕಳ ದೈಹಿಕ ಬೆಳವಣಿಗೆಗೆ ಬಹಳ ಸಹಕಾರಿ
ನೇತಾಡುವಂತಹ ಚಟುವಟಿಕೆಗಳು ಕೂಡ ಸ್ನಾಯುಗಳಿಗೆ ವ್ಯಾಯಾಮ ನೀಡಿ ಮಕ್ಕಳ ದೇಹ ಬೆಳವಣಿಗೆಯಾಗಲು ಸಹಾಯ ಮಾಡುತ್ತದೆ
ಮಕ್ಕಳು ಮಾಡಬಹುದಾದ ಸರಳ ಯೋಗಾಸನಗಳು ಅವರ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿವೆ.
ಪಾದದ ಬೆರಳು ಮುಟ್ಟುವ ಈ ಚಟುವಟಿಕೆ ಸ್ನಾಯುಗಳನ್ನು, ಮೂಳೆಗಳನ್ನು ಹಿಗ್ಗಿಸುತ್ತದೆ. ಮಕ್ಕಳು ಎತ್ತರವಾಗಿ ಬೆಳೆಯಲು ಈ ಆಸನ ಸಹಕಾರಿ
ಸ್ಕಿಪ್ಪಿಂಗ್ ಕೂಡ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುವ ಉತ್ತಮ ಚಟುವಟಿಕೆ
ಆಟಗಳು ಮಕ್ಕಳ ಮನಸ್ಸು ಸದಾ ಕ್ರಿಯಾಶೀಲವಾಗಿರುವಂತೆ ಪ್ರೋತ್ಸಾಹಿಸುತ್ತದೆ. ದೈಹಿಕ ಬೆಳವಣಿಗೆೆಗೂ ಕ್ರೀಡೆ ಮಕ್ಕಳಿಗೆ ಅವಶ್ಯಕ.
ಈ ಎಲ್ಲಾ ಸಲಹೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ. ಆದರೆ ಮಕ್ಕಳು ಎತ್ತರವಾಗಲೆಂದು ಒತ್ತಾಯಪೂರ್ವಕ ಚಟುವಟಿಕೆಗಳನ್ನು ಮಾಡಿಸಬೇಡಿ
ಮಕ್ಕಳನ್ನು ಸಾಧ್ಯವಾದಷ್ಟು ಕ್ರಿಯಾಶೀಲರಾಗಿಡಿ. ಇದರಿಂದ ಸಹಜವಾಗಿಯೇ ಅವರ ದೇಹ ಉತ್ತಮವಾಗಿ ರೂಪುಗೊಳ್ಳುತ್ತದೆ.
ಮಕ್ಕಳ ಬೆಳವಣಿಗೆಯಲ್ಲಿ ಆಹಾರ ಹಾಗೂ ನಿದ್ದೆ ಅತ್ಯಂತ ಅವಶ್ಯಕ. ಅದಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಿ.