ದೇಶೀಯ ವಿಮಾನಯಾನದ ಅಂಕಿಅಂಶಗಳನ್ನು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಬಿಡುಗಡೆ ಮಾಡಿದೆ.
ದೇಶೀಯ ವಿಮಾನ ಪ್ರಯಾಣಿಕರ ಪ್ರಮಾಣ 2021ಕ್ಕೆ ಹೋಲಿಸಿದರೆ 2022ರಲ್ಲಿ ಶೇ 47.05ರಷ್ಟು ಹೆಚ್ಚಾಗಿದೆ.
2021ರಲ್ಲಿ 838.14 ಲಕ್ಷ ಮಂದಿ ವಿಮಾನದಲ್ಲಿ ಪ್ರಯಾಣಿಸಿದ್ದರು; ಡಿಜಿಸಿಎ
2022ರಲ್ಲಿ 1232.45 ಲಕ್ಷ ಮಂದಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ; ಡಿಜಿಸಿಎ
ಡಿಸೆಂಬರ್ನಲ್ಲಿ ವಿಮಾನಯಾನಕ್ಕೆ ಸಂಬಂಧಿಸಿ 408 ದೂರುಗಳು ದಾಖಲಾಗಿವೆ; ಡಿಜಿಸಿಎ
ಡಿಸೆಂಬರ್ನಲ್ಲಿ ದಾಖಲಾದ ದೂರುಗಳೆಲ್ಲ ವಿಮಾನ ಸಮಸ್ಯೆ ಮತ್ತು ರಿಫಂಡ್ಗೆ ಸಂಬಂಧಿಸಿದ್ದಾಗಿದೆ; ಡಿಜಿಸಿಎ
ಕೋವಿಡ್ ನಂತರ ವಿಮಾನಯಾನ ಕ್ಷೇತ್ರ ಸುಧಾರಿಸಿರುವುದನ್ನು ಈ ಅಂಕಿಅಂಶಗಳು ಬಹಿರಂಗಪಡಿಸಿವೆ.