ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ನೀವು ಸೇವಿಸುಉ ಆಹಾರ ಕ್ರಮ ಹಾಗೂ ಜೀವನಶೈಲಿಯೂ ಪ್ರಮುಖವಾಗಿರುತ್ತದೆ.
ಜೀರ್ಣಕ್ರಿಯೆಯಲ್ಲಿ ಸಮಸ್ಯೆಯುಂಟಾದಾಗ ಹೊಟ್ಟೆನೋವು, ಎದೆಯುರಿ, ವಾಕರಿಕೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಆಯುರ್ವೇದದ ಪ್ರಕಾರ, ಮಧ್ಯಾಹ್ನದ ಊಟವು 2 ಗಂಟೆಯ ನಡುವೆ ಸೇವಿಸಬೇಕು. ಇದು ನಿಮ್ಮ ಪಿತ್ತಜನಕಾಂಗ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.
ಆರ್ಯುವೇದದ ಪ್ರಕಾರ ಆಹಾರ ಸೇವಿಸಿದ ಕೂಡಲೇ ಸ್ನಾನ ಮಾಡುವುದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.
ನೀವು ಆಹಾರ ಸೇವಿಸಿದ ನಂತರ 10 ರಿಂದ 15 ನಿಮಿಷಗಳ ಕಾಲ ನಡಿಗೆ ಜೀರ್ಣಕ್ರಿಯೆನ್ನು ಸರಾಗಗೊಳಿಸಲು ಸಹಾಯಕವಾಗಿದೆ.
ರಾತ್ರಿಯ ಊಟದ ಸಮಯದಲ್ಲಿ ಮೊಸರು ಸೇವಿಸುವ ಅಭ್ಯಾಸವಿದ್ದರೆ, ಇದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಖಾರ ಅಥವಾ ಮಸಾಲೆಯುಕ್ತ ಆಹಾರ ಸೇವಿಸಿದ ಮೇಲೆ ಫ್ರಿಜ್ ನಲ್ಲಿರಿಸಿದ ನೀರು ಕುಡಿಯುವುದು, ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ.