ನಿಮ್ಮ ಲುಕ್ ಬದಲಾಯಿಸುವ ವಿವಿಧ ವಿನ್ಯಾಸದ ಟೋಪಿಗಳು
ವಿವಿಧ ವಿನ್ಯಾಸದ, ಬಣ್ಣದ ಟೋಪಿಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದು ನಿಮ್ಮ ಲುಕ್ ಬದಲಾಯಿಸುವುದಲ್ಲದೇ, ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ಬೀಚ್ ಹ್ಯಾಟ್: ನೀವು ಬೀಚ್ ಕಡೆ ಪ್ರವಾಸ ಕೈಗೊಂಡ ಈ ರೀತಿಯ ಟೋಪಿಯನ್ನು ಖರೀದಿಸಿ.
ಬೆರೆಟ್ಸ್: ಉಣ್ಣೆ, ಹತ್ತಿಯಿಂದ ತಯಾರಿಸುವ ಈ ಟೋಪಿ ಕ್ಯೂಟ್ ಲುಕ್ ನೀಡುವುದರೊಂದಿಗೆ ಸಾಕಷ್ಟು ಆರಾಮದಾಯಕವೂ ಹೌದು.
ಬೋಹೋ ಹ್ಯಾಟ್: ಈ ಟೋಪಿ ಅಗಲವಾದ ಅಂಚುಗಳನ್ನು ಹೊಂದಿದ್ದು ನಿಮ್ಮ ಮುಖಕ್ಕೆ ರಕ್ಷಣೆಯನ್ನು ನೀಡುತ್ತದೆ.
ಬೌಲರ್ ಹ್ಯಾಟ್: ಈ ಟೋಪಿಯನ್ನು ಹೆಚ್ಚಾಗಿ ಕುದುರೆ ಸವಾರಿ ಮಾಡುವಾಗ ಧರಿಸುತ್ತಾರೆ.
ಬಕೆಟ್ ಹ್ಯಾಟ್: ಈ ಟೋಪಿಗಳು ಇತ್ತೀಚಿನ ದಿನಗಳಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.