ಕಾಮಾಲೆ ರೋಗದ ಅಪಾಯವನ್ನು ಕಡಿಮೆ ಮಾಡುವ ಆಹಾರಗಳು
ಯಕೃತ್ತಿನಲ್ಲಿ ಪಿತ್ತದಾಂಶದ ಪ್ರಮಾಣವು ಹೆಚ್ಚಾದಾಗ ಜಾಂಡೀಸ್ ಅಥವಾ ಕಾಮಾಲೆಗೆ ಕಾರಣವಾಗುತ್ತದೆ.
ಕೆಲವೊಂದು ಆಹಾರ ಕ್ರಮಗಳ ಮೂಲಕ ನಿಮ್ಮನ್ನು ಕಾಮಾಲೆಯ ಅಪಾಯದಿಂದ ಕಾಪಾಡಿಕೊಳ್ಳಬಹುದು.
ಬಾಯಾರಿಕೆ ಆಗದಿದ್ದರೂ ಸಾಕಷ್ಟು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
ಚಹಾದಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ.
ದಿನದಲ್ಲಿ ಮೂರು ಕಪ್ ಕಾಫಿ ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಬೆರ್ರಿ ಹಣ್ಣಿನಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕ ಸಮೃದ್ಧವಾಗಿದ್ದು, ಕಾಮಾಲೆಯ ಅಪಾಯದಿಂದ ರಕ್ಷಿಸುತ್ತದೆ.
ಧಾನ್ಯಗಳ ಸೇವನೆ ಜೀರ್ಣ ಕ್ರಿಯೆಯನ್ನು ಸುಧಾರಿಸಿ, ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ.