ಮನೆಯಲ್ಲಿಯೇ ಆಲ್ಕೋಹಾಲ್ ಮುಕ್ತ ಕೆಮ್ಮಿನ ಸಿರಪ್ ತಯಾರಿಸಿ
ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು, ಜೊತೆಗೆ ನೆಗಡಿ, ಜ್ವರ, ಕೆಮ್ಮು ಶುರುವಾಗಿ ಬಿಡುತ್ತದೆ.
ಆದರೆ ನೀವು ಖರೀದಿಸುವ ಕೆಲವೊಂದು ಕೆಮ್ಮಿನ ಸಿರಪ್ಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.
ಆದ್ದರಿಂದ ಮನೆಯಲ್ಲಿಯೇ ಲಭ್ಯವಿರುವ ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿ ಕೆಮ್ಮಿನ ಸಿರಪ್ ತಯಾರಿಸಿ.
ಶುಂಠಿ, ತುಳಸಿ, ಜೇನುತುಪ್ಪ, ನಿಂಬೆ, ಕರಿಮೆಣಸು ಬಳಸಿ ಸಿರಪ್ ತಯಾರಿಸಬಹುದು.
ಈ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.
ಈಗ ಇದು ತಣ್ಣಗಾದ ನಂತರ ಗಾಜಿನ ಪಾತ್ರೆಯಲ್ಲಿ ಹಾಕಿ ತಂಪಾದ ಒಣ ಸ್ಥಳದಲ್ಲಿ ಸಂಗ್ರಹಿಸಿಡಿ
ಮಳೆಗಾಲದಲ್ಲಿ ಕೆಮ್ಮಿನ ಸಮಸ್ಯೆಗೆ ದಿನಕ್ಕೆ ಎರಡು ಬಾರಿ ಒಂದೊಂದು ಚಮಚ ಸೇವಿಸಿ.
ಎರಡು ದಿನಕ್ಕಿಂತ ಹೆಚ್ಚು ಕೆಮ್ಮಿನ ಸಮಸ್ಯೆ ಕಂಡು ಬಂದರೆ ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ನೀಡಿ.