ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ
ನೀವು ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳು ಇವು
ಬೆಂಗಳೂರು ಅರಮನೆ: ಈ ಭವ್ಯ ಅರಮನೆ ಸುಂದರ ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿದೆ.
ಇಸ್ಕಾನ್ ಟೆಂಪಲ್: ಭವ್ಯವಾದ ಶ್ರೀ ಕೃಷ್ಣನ ದೇವಾಲಯದ ದರ್ಶನದ ಜೊತೆಗೆ ಕೃಷ್ಣನಿಗೆ ಪ್ರಿಯವಾದ ತಿಂಡಿಗಳನ್ನು ನೀವಿಲ್ಲಿ ಸವಿಯಬಹುದು.
ಲಾಲ್ ಬಾಗ್: ಸುಮಾರು 240 ಎಕರೆ ಪ್ರದೇಶದ ಉದ್ಯಾನವನದಲ್ಲಿ ನೀವು ಸುಂದರ ಸಮಯವನ್ನು ಕಳೆಯಿರಿ.
ಕಬ್ಬನ್ ಪಾರ್ಕ್: ಸುಮಾರು 300 ಎಕರೆ ವಿಸ್ತೀರ್ಣದ ಸಾವಿರಾರು ದಟ್ಟ ಮರಗಳಿಂದ ಕೂಡಿದ ಸುಂದರ ಉದ್ಯಾನವನ
ಮಾಕಳಿ ದುರ್ಗವು ಬೆಂಗಳೂರಿನಿಂದ 60 ಕಿಮೀ ದೂರದಲ್ಲಿದ್ದು,ರಜಾದಿನಗಳಲ್ಲಿ ವಿಹಾರಕ್ಕೆ ಉತ್ತಮ ಟ್ರೆಕ್ಕಿಂಗ್ ತಾಣವಾಗಿದೆ.
ನಂದಿಬೆಟ್ಟ: ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟವನ್ನೊಮ್ಮೆ ಕಣ್ತುಂಬಿಸಿಕೊಳ್ಳಿ.
ಬೆಂಗಳೂರಿನಿಂದ ಸುಮಾರು 22 ಕಿ.ಮೀ ದೂರದಲ್ಲಿರುವ ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ.