ಚಂದ್ರಯಾನ -3: ಜುಲೈ 13 ರಂದು ಮಧ್ಯಾಹ್ನ 2.30ಕ್ಕೆ ಚಂದ್ರಯಾನ 3 ಉಡಾವಣೆ
ಉಡಾವಣಾ ಸ್ಥಳ: ಶ್ರೀಹರಿಕೋಟಾದಲ್ಲಿ LVM ಮೂಲಕ ಉಡಾವಣೆ
ಚಂದ್ರಯಾನ ಉದ್ದೇಶ: ಚಂದ್ರನ ಮೇಲ್ಮೈಯಲ್ಲಿನ ರಾಸಾಯನಿಕ ಮತ್ತು ನೈಸರ್ಗಿಕ ಅಂಶಗಳು, ಮಣ್ಣು, ನೀರನ್ನು ಅನ್ವೇಷಿಸುವುದು
ಚಂದ್ರಯಾನ-3 ಖರ್ಚು: ಈ ಮಿಷನ್ಗಾಗಿ ಬರೋಬ್ಬರಿ 615 ಕೋಟಿ ರೂ. ಬಜೆಟ್ ನಿಗದಿಪಡಿಸಲಾಗಿದೆ
ಅಪಾಯಗಳನ್ನು ತಗ್ಗಿಸಲು ಮತ್ತು ಯಶಸ್ವಿ ಕಾರ್ಯಾಚರಣೆಗಾಗಿ ಚಂದ್ರಯಾನ-3 ಕಠಿಣ ಪರೀಕ್ಷೆ ಮತ್ತು ಮೌಲ್ಯೀಕರಣ ಪ್ರಕ್ರಿಯೆಗಳಿಗೆ ಒಳಗಾಗಿದೆ.
ಚಂದ್ರನ ಕಕ್ಷೆಯಿಂದ ಭೂಮಿಯ ರೋಹಿತ ಮತ್ತು ಧ್ರುವೀಯ ಅಳತೆ ಅಧ್ಯಯನ ಮಾಡಿ ವಿಜ್ಞಾನಿಗಳಿಗೆ ಡೇಟಾ ನೀಡುತ್ತದೆ.
ಚಂದ್ರಯಾನ-3 ಮಿಷನ್ ಆರ್ಬಿಟರ್ ಅನ್ನು ಒಯ್ಯುವುದಿಲ್ಲ
ಮಿಷನ್ಗೆ ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (ಶೇಪ್) ಪೇಲೋಡ್ ಸೇರ್ಪಡೆ
ಚಂದ್ರನ ಪೇಲೋಡ್ ಕಾನ್ಫಿಗರೇಶನ್ ಸೇರಿದಂತೆ ಮಿಷನ್ ವಿನ್ಯಾಸವನ್ನು ಆಪ್ಟಿಮೈಸ್ ಮಾಡಲಾಗಿದೆ
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿಎಸ್ಎಲ್ವಿ ಮಾರ್ಕ್ 3 ಹೆವಿ-ಲಿಫ್ಟ್ ಲಾಂಚ್ ವೆಹಿಕಲ್ ಬಳಸಿ ಉಡಾವಣೆ ಮಾಡಲು ನಿರ್ಧಾರ