ವೈಟ್ ರೈಸ್ ಗೆ ಹೋಲಿಸಿದರೆ ಬ್ರೌನ್ ರೈಸ್ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಬ್ರೌನ್ ರೈಸ್ ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಹೆಚ್ಚಿನವುಗಳಿಂದ ಸಮೃದ್ಧವಾಗಿರುವ ಬ್ರೌನ್ ರೈಸ್ ತೂಕ ಇಳಿಕೆಗೆ ಸಹಾಯಕ.
ಬ್ರೌನ್ ರೈಸ್ ನಲ್ಲಿ ಫೈಬರ್ ಸಮೃದ್ದವಾಗಿದ್ದು, ಹೆಚ್ಚು ಗಂಟೆಗಳ ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
ನೀವು ಕುಚ್ಚಲಕ್ಕಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸುವುದರಿಂದ ನಿಮ್ಮ ಜೀವಕೋಶಗಳಲ್ಲಿ ಉತ್ಕರ್ಷಣ ನಿರೋಧಕ ಹೆಚ್ಚಿಸುತ್ತದೆ.
ಒಂದು ಕಪ್ ಬ್ರೌನ್ ರೈಸ್ ಅನ್ನವನ್ನು ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಶೇಕಡಾ 60 ರಷ್ಟು ಕಡಿಮೆ ಮಾಡಬಹುದು.