ಪೊಗರು ಚಿತ್ರದಲ್ಲಿ ನಟಿಸಿದ್ದ ಬಾಡಿ ಬಿಲ್ಡರ್ 30ನೇ ವಯಸ್ಸಿಗೆ ನಿಧನ
ಧ್ರುವ ಸರ್ಜಾ ಜೊತೆಗೆ ಪೊಗರು ಸಿನಿಮಾದಲ್ಲಿ ಅಬ್ಬರಿಸಿದ್ದ ಬಾಡಿ ಬಿಲ್ಡರ್ ಜೋ ಲಿಂಡ್ನರ್.
ಕೇವಲ 30ನೇ ವಯಸ್ಸಿಗೆ ಇಹಲೋಹ ತ್ಯಜಿಸಿದ್ದು, ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ.
ಮೂಲತಃ ಜರ್ಮನ್ನಲ್ಲಿರುವ ಲಿಂಡ್ನರ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಫೇಮಸ್ ಆಗಿದ್ದರು.
ತನ್ನ ಫಿಟ್ನೆಸ್ ಮೂಲಕವೇ ಸೋಶಿಯಲ್ ಮೀಡಿಯಾಗಳಲ್ಲಿ ಮಿಲಿಯನ್ ಫಾಲೋವರ್ಸ್ಗಳನ್ನು ಪಡೆದುಕೊಂಡಿದ್ದರು.
ಕೆಲವು ದಿನಗಳ ಹಿಂದೆಯಷ್ಟೇ ಕುತ್ತಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪ್ರತೆಗೆ ದಾಖಲಿಸಲಾಗಿತ್ತು.
ಇದೀಗಾ ಸಾವಿನ ಸುದ್ದಿಯನ್ನು ಲಿಂಡ್ನರ್ನ ಗೆಳತಿ ನಿಚಾ ಖಚಿತ ಪಡಿಸಿದ್ದಾರೆ.
ಆ್ಯನ್ಯುರಿಸಮ್ ಎಂಬ ರಕ್ತನಾಳದ ಕಾಯಿಲೆಯಿಂದಾಗಿ ಬಳಲುತ್ತಿದ್ದ ಜೋ ಲಿಂಡ್ನರ್.
ಬಾಡಿಬಿಲ್ಡಿಂಗ್ ಲೋಕದ ಲೆಜೆಂಡ್ನ್ನು ಕಳೆದುಕೊಂಡಿದ್ದೇವೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.