ಕಪ್ಪು ಬೆಕ್ಕು ದಾರಿಗಡ್ಡ ಬಂದರೆ ಅಶುಭವೇ?
ಭಾರತದಲ್ಲಿ ಹಿಂದಿನಿಂದಲೂ ಕಪ್ಪು ಬೆಕ್ಕಿನ ಬಗ್ಗೆ ಸಾಕಷ್ಟು ಅಪನಂಬಿಕೆಗಳಿವೆ.
ಕಪ್ಪು ಬೆಕ್ಕುದಾರಿಗಡ್ಡ ಬಂದರೆ ಅಥವಾ ಕನಸಿನಲ್ಲಿ ಕಾಣಿಸಿಕೊಂಡರೆ ಏನಾದರೂ ಕೆಟ್ಟದಾಗುತ್ತದೆ ಎಂದು ಸಾಕಷ್ಟು ಜನರು ನಂಬುತ್ತಾರೆ.
ಆದರೆ ಕೆಲವೊಂದು ದೇಶಗಳಲ್ಲಿ ಕಪ್ಪು ಬೆಕ್ಕು ದಾರಿ ಗಡ್ಡ ಬಂದರೆ ಶುಭದಿನ ಎಂದು ಪರಿಗಣಿಸುತ್ತಾರೆ ಎಂದು ತಿಳಿದಿದೆಯೇ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕಪ್ಪು ಬೆಕ್ಕನ್ನು ಶನಿ ದೇವರ ರೂಪ ಎಂದು ಪರಿಗಣಿಸಲಾಗುತ್ತದೆ.
ಆದ್ದರಿಂದ ಬೆಕ್ಕು ಅಡ್ಡ ಬಂದಾಗ ಅದು ಶನಿ ಗ್ರಹಚಾರ ನಮ್ಮನ್ನು ಪ್ರವೇಶ ಮಾಡುತ್ತದೆ ಎಂದು ಸಾಕಷ್ಟು ಜನರು ನಂಬುತ್ತಾರೆ.
ಇದು ಈ ದಿನದ ಯಾವುದೇ ಕೆಲಸವನ್ನು ವಿಳಂಬಗೊಳಿಸುತ್ತದೆ ಅಥವಾ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ ಎಂಬ ನಂಬಲಾಗಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕಪ್ಪು ಬೆಕ್ಕು ದಾಟಿದರೆ ಆ ದಾರಿಯಲ್ಲಿ ಇನ್ನೊಬ್ಬರು ಹೋಗುವವರೆಗೆ ಕಾದು ಮತ್ತೆ ನಾವು ದಾಟಬೇಕು.
ಆದರೆ ಜರ್ಮನಿ, ಬಿಟ್ರನ್, ಜಪಾನ್ ದೇಶಗಳಲ್ಲಿ ಕಪ್ಪು ಬೆಕ್ಕು ರಸ್ತೆಗಟ್ಟ ದಾಟಿದರೆ ಅಥವಾ ಮನೆಗೆ ಬಂದರೆ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ.