ಚಂದ್ರಯಾನ 3 ಆಯಿತು, ಭಾರತದ ಮುಂದಿನ ಬಾಹ್ಯಾಕಾಶ ಯೋಜನೆಗಳೇನಿವೆ?

ಭಾರತದ ಎರಡನೇ ಚಂದ್ರಯಾನ ಯೋಜನೆ ಯಶಸ್ವಿಯಾಗಿದೆ. 2023 ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ನೆಲ ಸ್ಪರ್ಶಿಸಿ, ಈ ಸಾಧನೆ ಮಾಡಿದ ಮೊದಲ ದೇಶವಾಗಿದೆ.

ಚಂದ್ರಯಾನ-1ಕ್ಕೆ 365 ಕೋಟಿ ರೂ, ಚಂದ್ರಯಾನ-2ಕ್ಕೆ 978 ಕೋಟಿ ರೂ, ಚಂದ್ರಯಾನ-3ಕ್ಕೆ 615 ಕೋಟಿ ರೂ ವೆಚ್ಚವಾಗಿದೆ. ಭಾರತದಿಂದ ಮುಂದಿನ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಮಾಹಿತಿ ಮುಂದೆ ಓದಿ.

ಆದಿತ್ಯ-ಎಲ್1 ಎಂದು ಕರೆಯಲಾಗುವ ಈ ಯೋಜನೆ ಭಾರತದ ಮೊದಲ ಸೌರಯಾನವಾಗಲಿದೆ. ಇದರ ವೆಚ್ಚ 378 ಕೋಟಿ ರೂ. ಇದು ಈ ವರ್ಷವೇ (2023) ನಡೆಯಲಿದೆ.

ಸೌರಯಾನ

ನಾಸಾ ಮತ್ತು ಇಸ್ರೋ ಜಂಟಿಯಾಗಿ 2024ರಲ್ಲಿ NISAR ಉಪಗ್ರಹವನ್ನು ಭೂಮಿಯ ಕೆಳಕಕ್ಷೆಗೆ ಬಿಡಲಾಗುತ್ತದೆ. ಭೂಮಿಯ ಹವಾಮಾನ ವ್ಯವಸ್ಥೆಯ ಬದಲಾವಣೆ ಅರಿಯಲು ಇರುವ ಯೋಜನೆಗೆ ವೆಚ್ಚ 12,296 ಕೋಟಿ ರೂ ಇದೆ.

NISAR ಸೆಟಿಲೈಟ್

ಆಗಸದಲ್ಲಿ ಗಗನನೌಕೆ ನಿಲ್ದಾಣ ರೀತಿಯ SPADEX ಪ್ರಯೋಗವನ್ನು ಇಸ್ರೋ 2024ರಲ್ಲಿ ಕೈಗೊಳ್ಳಲಿದೆ. ಇದರ ವೆಚ್ಚ 124 ಕೋಟಿ ರೂ.

SPADEX

2024ರಲ್ಲಿ ಭಾರತದ ಎರಡನೇ ಮಂಗಳಯಾನ ಯೋಜನೆ ನಡೆಯಲಿದೆ. ಇದರ ವೆಚ್ಚದ ಬಗ್ಗೆ ಮಾಹಿತಿ ತಿಳಿದಿಲ್ಲ.

ಮಂಗಳಯಾನ-2

ಭಾರತದಿಂದ ಮೊದಲ ಬಾರಿಗೆ ಮನುಷ್ಯರನ್ನು ಆಗಸಕ್ಕೆ ಕಳುಹಿಸುವ ಯೋಜನೆ 2024ರಲ್ಲಿ ನಡೆಯಲಿದೆ. ಮೂವರು ಗಗನಯಾತ್ರಿಗಳು 400 ಕಿಮೀ ಎತ್ತರದ ಭೂಕಕ್ಷೆಯಲ್ಲಿ 3 ದಿನ ಸುತ್ತಲಿದ್ದಾರೆ. ಇದರ ವೆಚ್ಚ 9,023 ಕೋಟಿ ರೂ.

ಗಗನಯಾನ

ಶುಕ್ರ ಗ್ರಹಕ್ಕೆ ಭಾರತದ ಮೊದಲ ಮಿಷನ್ ಇದು. 2031ರಲ್ಲಿ ಇದು ಕೈಗೂಡುವ ನಿರೀಕ್ಷೆ ಇದೆ. ಇದರ ಅಂದಾಜು ವೆಚ್ಚ 500ರಿಂದ 1000 ಕೋಟಿ ರೂ ಎನ್ನಲಾಗಿದೆ.

ಶುಕ್ರಯಾನ 1