ಜಿಮ್ ವರ್ಕ್-ಔಟ್ ಬಳಿಕ ಸೇವಿಸಬೇಕಾದ 8 ಆಹಾರ
ಸ್ನಾಯುಗಳಲ್ಲಿ ಶಕ್ತಿಯನ್ನು ತುಂಬಲು ಮತ್ತು ಆಯಾಸದಿಂದ ಚೇತರಿಸಿಕೊಳ್ಳಲು ವರ್ಕ್ ಔಟ್ ಆದ 30-40 ನಿಮಿಷದ ಒಳಗೆ ಈ ಆಹಾರವನ್ನು ಸೇವಿಸಬೇಕು.
ಬೇಯಿಸಿದ ಮೊಟ್ಟೆ: ನೀವು 2-3 ಬೇಯಿಸಿದ ಮೊಟ್ಟೆಯನ್ನು ಸೇವಿಸಬಹುದು, ಮೊಟ್ಟೆಯ ಹಳದಿ ಭಾಗವನ್ನು ತಿನ್ನಲು ಬಯಸದೆ ಇರುವವರು 4-5 ಮೊಟ್ಟೆಯನ್ನು ತಿನ್ನಬಹುದು.
ಬಾಳೆಹಣ್ಣಿನ ಸ್ಮೂದಿ: ಬಾಳೆಹಣ್ಣು, ಪೀನಟ್ ಬಟರ್ ಮತ್ತು ಹಾಲು ಸೇರಿಸಿ ಬಾಳೆಹಣ್ಣಿನ ಸ್ಮೂದಿ ತಯಾರಿಸಿ ಸೇವಿಸಿ. ಪೋಸ್ಟ್ ವರ್ಕ್ ಔಟ್ ಸೇವನೆಗೆ ಬಹಳ .ಸೂಕ್ತವಾದದ್ದು
ಗ್ರಿಲ್ಡ್ ಚಿಕೆನ್: ಚಿಕೆನ್ ನಿಮಗೆ ಪ್ರೊಟೀನ್ ಅನ್ನು ನೀಡುತ್ತದೆ. ಮಸಾಲೆಗಳನ್ನೂ ಬಳಸುವ ಬದಲು ಗ್ರಿಲ್ ಮಾಡಿ ತಿನ್ನುವುದು ಉತ್ತಮ.
ಪ್ರೊಟೀನ್ ಶೇಕ್: ಪ್ರೊಟೀನ್ ಶೇಕ್ ನಿಮಗೆ ಪ್ರೊಟೀನ್ ಕೊಡುವುದರ ಜೊತೆಗೆ ಹಸಿವಾಗದಂತೆ ತಡೆಯುತ್ತದೆ. ಆದರೆ ಪ್ರೊಟೀನ್ ಶೇಕ್ ಸೇವಿಸಿದ ಬಾಳಿಕೆ ಬಹಳಷ್ಟು ನೀರು ಕುಡಿಯಬೇಕು
ಡ್ರೈ ಫ್ರೂಟ್ಸ್: ಒಂದು ಬಾಕ್ಸ್ ನಲ್ಲಿ ಗೋಡಂಬಿ, ಬಾದಾಮಿ, ಪಿಸ್ತಾ ಇವುಗಳು ತೆಗೆದುಕೊಂಡು ಹೋಗಿ ವ್ಯಾಯಾಮದ ಬಳಿಕ ಸೇವಿಸಿ.
ಬೇಯಿಸಿದ ಗೆಣಸು: ಗೆಣಸಿನಲ್ಲಿ ಕಾರ್ಬೋಹೈಡ್ರೇಟ್ ಇರುತ್ತದೆ. ಇದನ್ನು ಬೇಯಿಸಿ ತಿನ್ನುವುದು ಉತ್ತಮ.
ಗ್ರೀಕ್ ಯೋಗರ್ಟ್ ಮತ್ತೆ ಹಣ್ಣುಗಳು: ವರ್ಕ್ ಔಟ್ ಬಳಿಕ ಸೇವಿಸಲು ಇದು ಉತ್ತಮ ಆಹಾರ. ಇದನ್ನು ಸೇವಿಸಿದ ಬಳಿಕ ನಿಮಗೆ ನಿಮ್ಮ ದೇಹ ಹಗುರವಾದಂತೆ ಅನಿಸುತ್ತದೆ.
ಪನೀರ್ ಮತ್ತು ತರಕಾರಿ:: ಅರ್ಧ ಬೇಯಿಸಿದ ಪನೀರ್ ಮತ್ತು ಇತರ ತರಕಾರಿಗಳು, ಅಂದರೆ ಕ್ಯಾಪ್ಸಿಕಂ, ಈರುಳ್ಳಿ, ಜೋಳ ಇತರ ತರಕಾರಿಗಳನ್ನೂ ಬಳಸಬಹುದು.