ಇಡೀ ದಿನ ಕುಳಿತುಕೊಂಡೇ ಕೆಲಸ ಮಾಡುತ್ತೀರಾ? ಈ ಟಿಪ್ಸ್ ಫಾಲೋ ಮಾಡಿ
ನೀವು ಕಛೇರಿಯಲ್ಲಿ ಇಡೀ ದಿನ ಕುಳಿತುಕೊಂಡು ಕೆಲಸ ಮಾಡುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು.
ಸಾಕಷ್ಟು ಹೊತ್ತಿನ ವರೆಗೆ ಕುಳಿತುಕೊಳ್ಳುವುದು ಬೆನ್ನು ನೋವಿನಿಂದ ಹಿಡಿದ ಬೊಜ್ಜಿನ ವರೆಗೆ ಸಾಕಷ್ಟು ಸಮಸ್ಯೆಗಳನ್ನು ತರುತ್ತದೆ.
ಆದ್ದರಿಂದ ನಿಮ್ಮ ಆಫೀಸ್ ಅವಧಿಯಲ್ಲಿ ಈ ಸಿಂಪಲ್ ಯೋಗ ಭಂಗಿಗಳನ್ನು ಅಭ್ಯಾಸಿಸಿ.
ಪ್ರತೀ 30 ನಿಮಿಷಗಳಿಗೆ ಒಂದು ಬಾರಿ ಎದ್ದು ಸ್ವಲ್ಪ ಹೊತ್ತು ನಡೆಯಿರಿ.
ಕುಳಿತುಕೊಂಡಲ್ಲೇ ಕಾಲುಗಳನ್ನು ನೇರವಾಗಿ ಚಾಚಿ ಕೆಲವು ನಿಮಿಷಗಳ ಕಾಲ ಹಿಡಿದಿಟ್ಟುಕೊಳ್ಳಿ.
ನಿಮ್ಮ ಎದೆ ಹಾಗೂ ತೋಳುಗಳನ್ನು ಗುರಿಯಾಗಿಟ್ಟುಕೊಂಡು ಮೇಜಿನ ಮೇಲೆ ಪುಷ್ ಅಪ್ ಮಾಡಿ.
ಕುರ್ಚಿಯಲ್ಲೆ ಕುಳಿತುಕೊಂಡು ಬೈಸಿಕಲ್ ಪೆಡಲಿಂಗ್ ಮಾಡುವ ರೀತಿಯಲ್ಲಿ ಕೆಲ ನಿಮಿಷಗಳ ವರೆಗೆ ಮಾಡಿ.